ನ್ಯಾಮತಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸ ಬೇಕು ಎಂದು ಆಗ್ರಹಿಸಿ ಮಹಿಳಾ ನಿವಾಸಿಗಳು ತಹಶೀಲ್ದಾರ್ ಎಂ.ರೇಣುಕಾಅವರಿಗೆ ಮಂಗಳವಾರ ಆಗ್ರಹಿಸಿದರು.
ನ್ಯಾಮತಿ:
ಪಟ್ಟಣದಲ್ಲಿ ಹಾದು ಹೋಗಿರುವಚೀಲೂರು-ನ್ಯಾಮತಿ-ಗೋವಿನಕೋವಿ ಜಿಲ್ಲಾ ಮುಖ್ಯರಸ್ತೆಯ ವೀರಭದ್ರೇಶ್ವರ ದೇವಸ್ಥಾನ ರಸ್ತೆ ಅಭಿವೃದ್ದಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ದೂರಿ ಮಂಗಳವಾರ ಮಹಿಳೆಯರು ತಹಶೀಲ್ದಾರ್ ಎಂ.ರೇಣುಕಾಅವರಿಗೆ ಮನವಿ ಸಲ್ಲಿಸಿದರು.
ಸುಮಾರುಒಂದು ವರ್ಷದ ಹಿಂದಿನಿಂದರಸ್ತೆಅಭಿವೃದ್ದಿ ಸಂಬಂಧಿಸಿದಂತೆ ಇಕ್ಕೆಲಗಳಲ್ಲಿ 22 ಅಡಿ ತೆರವುಗೊಳಿಸುವಂತೆ ಶಾಸಕ ಎಂ.ಪಿ.ರೇಣುಕಾಚಾರ್ಯಅವರ ಮನವಿಗೆ ಸ್ಪಂದಿಸಿ ರಸ್ತೆಯನ್ನು ತೆರವುಗೊಳಿಸಿದ್ದಾರೆ. ಅಂದಿನಿಂದ ಇಂದಿನವರೆಗೂಗುತ್ತಿಗೆದಾರರಸ್ತೆಅಭಿವೃದ್ದಿಗೆಗಮನಹರಿ¸ದಿರುವುದರಿಂದ ಮನೆ ತೆರವುಗೊಳಿಸಿದ ಮನೆಯವರಿಗೆ ಹಾಗೂ ರಸ್ತೆಯಲ್ಲಿ ಮಣ್ಣು,ಕಲ್ಲು ಗುಂಡಿಗಳು ಬಿದ್ದಿರುವುದರಿಂದ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ. ಗುತ್ತಿಗೆದಾರ ಸರಿಯಾಗಿಕಾಮಗಾರಿ ನಿರ್ವಹಿಸುತ್ತಿಲ್ಲಎಂದು ಮಹಿಳೆಯರ ತಹಶೀಲ್ದಾರ್ ಬಳಿ ದೂರಿದರು.
ಬುಧವಾರದಿಂದಲೇ ಕೆಲಸ ಆರಂಭಿಸದಿದ್ದರೆರಸ್ತೆ ಬದಿ ಟೆಂಟ್ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಗ್ರಾ.ಪಂ.ಮಾಜಿಉಪಾಧ್ಯಕ್ಷೆ ಸುನೀತಾ, ನಿವಾಸಿಗಳಾದ ಜೋಗದ ಶಾಂತ, ಆರುಂಡಿಗಿರಿಜಮ್ಮ, ನೀಲಮ್ಮ, ಲತಾ, ಗೌರಮ್ಮ, ಆಶಾ, ಮಂಜುಳಾ ಹೇಳಿದರು.
ಈ ಸಂದರ್ಭದಲ್ಲಿ ಬಗರ್‍ಹುಕುಂ ಸಮತಿಅಧ್ಯಕ್ಷ ವೀರಣ್ಣಗೌಡ, ಪಿಎಸ್‍ಐ ಪಿ.ಎಸ್.ರಮೇಶ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ.ಕೊಟ್ರೇಶಿ, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟಪೂರ್ವಅಧ್ಯಕ್ಷ ಜಿ. ನಿಜಲಿಂಗಪ್ಪ ಎನ್.ಟಿ.ನಾಗರಾಜ, ಕೆ. ವೀರೇಶ, ಬಸವರಾಜ, ಡಿ.ಎಂ.ಮಲ್ಲಿಕಾರ್ಜುನಇದ್ದರು.

Leave a Reply

Your email address will not be published. Required fields are marked *