ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಕಕ್ಕರಗೊಳ್ಳದಲ್ಲಿ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ. ವೆಂಕಟೇಶ್ ಎಲ್.ಡಿ ಮಾತನಾಡಿ ಪ್ರತಿ ವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ಕರೆಯಲಾಗುತ್ತದೆ. ‘’ಎಲ್ಲರಿಗೂ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಜಾಗತಿಕ ಆದ್ಯತೆಯನ್ನಾಗಿ ಮಾಡುವುದು’’. ಎಂಬ ಘೋಷಣೆ ಹೊರಡಿಸಲಾಗಿದೆ.
ಮಾನಸಿಕ ರೋಗದ ಲಕ್ಷಣಗಳು ಅತಿಯಾದ ಚಿಂತೆ, ಸದಾ ಚಡಪಡಿಕೆ, ಆತ್ಮಹತ್ಯೆಯ ಆಲೋಚನೆಗಳು, ಯಾವುದೇ ಅಸಹಜ ವರ್ತನೆ, ಒಬ್ಬರೆ ಮಾತನಾಡುವುದು, ನಗುವುದು, ಓಂಟಿತನ ಬಯಸುವುದು, ಅಳುವುದು, ಈ ತರಹದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿಮಾಡಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಆರೋಗ್ಯ ವೆಂದರೆ ಸಂಪೂರ್ಣ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಸುಸ್ಥಿರ ಕೇವಲ ರೋಗ ಭಾದೆಗಳ
ಜಾಗತಿಕವಾಗಿ 792 ಮಿಲಿಯನ್ ಜನರು ಮಾನಸಿಕ ಅಸ್ವಸ್ಥತೆಗಳೊಂದಿಗೆ ವಾಸಿಸುತ್ತಿದ್ದಾರೆ, ಶೇಕಡಾ ಹತ್ತರಷ್ಟು ಜನರು ಸಾಮಾನ್ಯ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ, ಶೇಕಡಾ ಒಂದರಷ್ಟು ಜನಸಂಖ್ಯೆಯು ತೀವ್ರತರದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ, ಕಳಂಕ ಮತ್ತು ತಾರತಮ್ಯವನ್ನು ಹೋಗಲಾಡಿಸೋಣ ಮತ್ತು ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ಮನಸ್ಸನ್ನು ಘೋಷಿಸೋಣ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಅಕ್ಟೋಬರ್ 11 ಕ್ಕೆ ಆಚರಿಸಲಾಯಿತು. ಡಾ. ವೆಂಕಟೇಶ್ ಎಲ್ ಡಿ ಮಾತನಾಡಿ ಘೋಷಣೆ ‘’ಈಗ ನಮ್ಮ ಸಮಯ- ನಮ್ಮ ಹಕ್ಕುಗಳು, ನಮ್ಮ ಭವಿಷ್ಯ’’ ಎನ್ನುವ ವಾಕ್ಯದೋಂದಿಗೆ ಆಚರಣೆ ಮಾಡಲಾಯಿತು.
ಇದೇ ವೇಳೆ ಗ್ರಾಮಸ್ಥರು, ಜೆ.ಜೆ.ಎಮ್.ಎಮ್.ಸಿ ವೈದ್ಯರು, ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು