ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ರವರು  ಅ.14 ರಂದು ಬೆಳಗ್ಗೆ 10.30 ರಿಂದ ಸಂ.05 ಗಂಟೆಯ ವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡುವುದು. ನಂತರ ಹೊನ್ನಾಳಿಗೆ ಪ್ರಯಾಣ. ಸಂ.06 ಕ್ಕೆ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ನಡೆಯುವ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಅ.15 ರಂದು ಬೆಳಗ್ಗೆ 11 ಗಂಟೆಗೆ ಹೊನ್ನಾಳಿ ಪಟ್ಟಣದಲ್ಲಿ ಕೆ.ಎಲ್.ಎಂ. ಎಕ್ಸಿವಾ ಫಿನ್‍ವೆಸ್ಟ್ ಬ್ಯಾಂಕ್ ಉದ್ಘಾಟನೆ ನೆರವೇರಿಸುವರು. ಬೆಳಗ್ಗೆ 11.45 ರಿಂದ ಸಂ.05 ಗಂಟೆಯ ವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡುವುದು. ನಂತರ ಹೊನ್ನಾಳಿಗೆ ಪ್ರಯಾಣ. ಸಂಜೆ 06 ಕ್ಕೆ ನ್ಯಾಮತಿ ತಾಲ್ಲೂಕಿನ ಸೋಗಿಲು ಗ್ರಾಮದಲ್ಲಿ ನಡೆಯುವ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.
       ಅ.16 ರಂದು ಬೆಳಗ್ಗೆ 10.30 ಗಂಟೆಗೆ ನ್ಯಾಮತಿ ತಾಲ್ಲೂಕಿನ ಶ್ರೀ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರÀದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ನೊ), ನ್ಯಾಮತಿ ನೂತನ ತಾಲ್ಲೂಕು ಘಟಕ ಉದ್ಘಾಟನೆ, ರಕ್ತದಾನ ಶಿಬಿರ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸುವರು. ಮ.01.15 ಕ್ಕೆ ಹೊನ್ನಾಳಿಗೆ ಪ್ರಯಾಣ ಮತ್ತು ಹೊನ್ನಾಳಿಯಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ನಂತರ ಸಾರ್ವಜನಿಕ ಕುಂದುಕೊರತೆಗಳ ಅಹ್ವಾಲುಗಳನ್ನು ಸ್ವೀಕರಿಸುವುದು ಮತ್ತು ಹೊನ್ನಾಳಿಯಲ್ಲಿ ವಾಸ್ತವ್ಯ.
ಅ.17 ರಂದು ಬೆಳಗ್ಗೆ 10.30 ರಿಂದ ಸಂ.07 ಗಂಟೆಯ ವರೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡುವರು ನಂತರ ಹೊನ್ನಾಳಿಗೆ ಪ್ರಯಾಣ ಬೆಳೆಸಿ ವಾಸ್ತವ್ಯ.
ಅ.18 ರಂದು ಬೆಳಗ್ಗೆ 10.30 ಕ್ಕೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಲುಮರದ ತಿಮ್ಮಕ್ಕನವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆ.11.45 ಕ್ಕೆ ನ್ಯಾಮತಿ ತಾಲ್ಲೂಕು ಸೋಗಿಲು ಗ್ರಾಮದಲ್ಲಿ ಧರ್ಮಸ್ಥಳ ಸಂಘದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *