ಹೊನ್ನಾಳಿ:
ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಕುಂಚಿಟಿಗ ಜನಾಂಗ ಅಭಿವೃದ್ಧಿ ಹೊಂದಬೇಕು ಎಂದು ಹಿರಿಯ ಮುಖಂಡ ಜಿ.ಪಿ. ವರದರಾಜಪ್ಪಗೌಡ್ರು ಹೇಳಿದರು.
ಕುಂಚಿಟಿಗರ ಸಂಘದ ವತಿಯಿಂದ ಹೊನ್ನಾಳಿಯಿಂದ ಶಿಕಾರಿಪುರಕ್ಕೆ ಭಾನುವಾರ ತೆರಳಿದ ಬೈಕ್ ರ್ಯಾಲಿಗೆ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಶ್ರೀ ವಿಜಯ ಸಂಗಮ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕುಂಚಿಟಿಗ ಜನಾಂಗ ಅಭಿವೃದ್ಧಿ ಹೊಂದಬೇಕಾದರೆ ಮೀಸಲಾತಿ ಅಗತ್ಯ. ಹಾಗಾಗಿ, ಕೇಂದ್ರ ಸರಕಾರ ಕುಂಚಿಟಿಗ ಜನಾಂಗಕ್ಕೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಯುವ ರೈತ ಮುಖಂಡ ಸುಂಕದಕಟ್ಟೆ ಕರಿಬಸಪ್ಪ, ಬಿಆರ್‍ಪಿ ಜಿ.ಕೆ. ಅರುಣ್‍ಕುಮಾರ್, ಉಪನ್ಯಾಸಕ ಹಿರೇಬಾಸೂರು ಎಚ್.ಜಿ. ಮುರಳೀಧರ್, ಕುಂಚಿಟಿಗ ನೌಕರರ ಸಂಘದ ಮುಖಂಡರಾದ ನರಸಗೊಂಡನಹಳ್ಳಿ ಶಾಂತರಾಜ್ ಪಾಟೀಲ್, ಪುರುಷೋತ್ತಮ್, ಮಾಸಡಿ ಪ್ರಹ್ಲಾದ್, ಸುಂಕದಕಟ್ಟೆ ಡಿ.ಬಿ. ರವೀಂದ್ರನಾಥ್, ಹಿರೇಬಾಸೂರು ಹಾಲೇಶ್, ಹರೀಶ್, ಯುವ ನಾಯಕ ಗೊಲ್ಲರಹಳ್ಳಿ ಕಿರಣ್ ಇತರರು ಇದ್ದರು.
ಕುಂಚಿಟಿಗ ಜನಾಂಗವನ್ನು ಒಬಿಸಿಗೆ ಸೇರ್ಪಡೆಗೊಳಿಸಲು ಆಗ್ರಹಿಸಿ ಶಿಕಾರಿಪುರದಲ್ಲಿ ಭಾನುವಾರ ಒಬಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದ್ದು, ಹೊನ್ನಾಳಿಯಿಂದ ಎರಡು ನೂರಕ್ಕೂ ಅಧಿಕ ಬೈಕ್‍ಗಳು, ನಾಲ್ಕು ಬಸ್‍ಗಳಲ್ಲಿ ಕುಂಚಿಟಿಗ ಸಮಾಜದ ಬಂಧುಗಳು ತೆರಳಿದರು.