ನ್ಯಾಮತಿ.
ಪತ್ರಿಕಾ ರಂಗವು ಸ್ವತಂತ್ರ ಪೂರ್ವದಲ್ಲಿ ಇದ್ದ ಪ್ರಾಮಾಣಿಕ ಬದ್ಧತೆ ಇಂದು ಇಲ್ಲದಂತಾಗುತ್ತಿದ್ದು ಪತ್ರಕರ್ತರು ವಸ್ತುನಿಷ್ಟ ವರದಿಗಳನ್ನು ಮಾಡುವ ಮೂಲಕ ಸಮಾಜದಲ್ಲಿ ತಮ್ಮ ಸ್ಥಾನದ ಪ್ರಜ್ಞೆ ಅರಿತು ವರದಿ ಮಾಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಹೇಳಿದರು.
ಪಟ್ಟಣದ ಮಹಂತೇಶ್ವರ ವಿರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ನ್ಯಾಮತಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಘಟಕದ ನಾಮ ಫಲಕದ ಅವಾವರಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರು ಹುಟ್ಟು ಹೆಚ್ಚಾಗುತ್ತಿದ್ದು ಸಮಾಜದಲ್ಲಿ ವೃತ್ತಿ ನಿಷ್ಠ ಪ್ರಮಾಣಿಕ ಪತ್ರಕರ್ತರಿಗೆ ಅಂಥವರಿಂದ ಅಪಾಯವಿದೆ, ಪತ್ರಕರ್ತರು ವಿಸಿಟಿಂಗ್ ಕಾರ್ಡ್ ಪತ್ರಕರ್ತರಾಗದೆ ವೃತ್ತಿನಿಷ್ಟೆ , ಶ್ರಮ, ಬದ್ಧತೆ, ಛಲ ಇದ್ದರೆ ಯಶಸ್ಸು ಸಾಧ್ಯವೆಂಬುದಕ್ಕೆ ಪತ್ರಿಕೆ ಹಂಚಿಕೆ ಮಾಡುತ್ತಿದ್ದ ಅಬ್ದುಲ್ ಕಲಾಂ ಮತ್ತು ಚಹಾ ಮಾರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರೆ ದೊಡ್ಡ ಸಾಕ್ಷಿಯಾಗಿದ್ದು ಗಾಂಧಿಜೀ, ಅಂಬೇಡ್ಕರ್ ಅವರ ಮಾರ್ಗದಲ್ಲಿ ಮುನ್ನಡೆಯುವಂತೆ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಇಂದು ಹಲವರು ಯೋಜನೆಗಳನ್ನು ಹಾಕಿಕೊಂಡಿದ್ದು ಪ್ರಥಮ ಭಾರಿಗೆ ಶೇ 90 ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡುವುದರ ಮೂಲಕ ಅವರ ಮಕ್ಕಳನ್ನು ಪ್ರೋತ್ಸಾಹಿಸಿರುವುದಾಗಿ ಹೇಳಿದರು.
ಕರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಕರ್ತರಿಗೆ ಹಲವು ರೀತಿ ಸಹಾಯ ಹಸ್ತ ಸಹಕಾರ ನೀಡಿರುವುದಾಗಿ ಹೇಳಿದರು.
ಕರ್ನಾಟಕ ಪತ್ರಕರ್ತರ ಸಂಘ ರಾಜ್ಯ ಕಾರ್ಯದರ್ಶಿ ಜೆ.ಸಿ.ಲೊಕೇಶ್ ತವರೂರು ಸನ್ಮಾನ ಸ್ವಿಕರಿಸಿ ಮಾತನಾಡಿ ಕರ್ನಾಟಕ ಪತ್ರಕರ್ತರ ಸಂಘ ರಾಜ್ಯದ ಅತೀ ದೊಡ್ಡ ಸಂಘಟನೆಯಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ 500ರೂ ಸಹಾಯಧನದಿಂದ ಸಂಘ ಸ್ಥಾಪನೆ ಆದಾಗ ಇದ್ದದ್ದೆ ನಾಲ್ಕು ಜನ ಇಂದು ದೇಶದ ಅತೀ ದೊಡ್ಡ ಮತ್ತು 91 ವರ್ಷ ಸಂಘಟನೆ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘ ಮಾತ್ರ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮಿಜೀ ಅವರು ವಹಿಸಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡರು ಮಾತನಾಡಿ ಸಂಘ ಸಂಘಟನೆ ಇದ್ದರೆ ಮಾತ್ರ ಪತ್ರಕರ್ತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಿರುವುದಾಗಿ ಹೇಳಿದರು.
ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳಾದ ಕೆ.ಆರ್. ಚೇತನ ರಕ್ತದಾನ ಶಿಬಿರವನ್ನು ರಕ್ತ ನೀಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ ಫಲವನಹಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ ಸಂದರ್ಭದಲ್ಲಿ ಮಾಧ್ಯಮದವರ ಸಹಕಾರವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಸ್.ಶಾಸ್ತ್ರಿಹೊಳೆಮಠ ವಹಿಸಿದ್ದರು.
ಸನ್ಮಾನ.
ಹಿರಿಯ ಪತ್ರಕರ್ತರಾದ ಶಿವಾರುದ್ರಯ್ಯ ಹಿರೇಮಠ, ಶಿವಾನಂದಪ್ಪ.ಎಚ್, ವಿತರಕರಾದ ಜಿ.ರುದ್ರಪ್ಪ, ನಿವೃತ್ತ ಯೋಧ ಬಿಎಂ.ವಿರೇಶ ನೈಸರ್ಗಿಕ ಕೃಷಿಕ ಮಲ್ಲಿಕಾರ್ಜುನಪ್ಪ ಅವರನ್ನು ಸನ್ಮಾನಿಸಲಾಯಿತು.
ಹೊನ್ನಾಳಿ ನ್ಯಾಮತಿ ತಾಲೂಕು ವಿರಶೈವ ಮಹಾಸಭಾ ನೂತನ ಅಧ್ಯಕ್ಷರಾದ ಹವಳದ ಲಿಂಗರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರದ ಡಾ.ಆನಂದ, ರಾಮೇಶ್ವರ ನೈಸರ್ಗಿಕ ಕೃಷಿಕ ಮಲ್ಲಿಕಾರ್ಜುನಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿರೂಪಣೆ ಶಿಕ್ಷಕಿ ಬಿ.ಜಿ.ಚೈತ್ರಾ ತಿಪ್ಪೇಸ್ವಾಮಿ, ನವುಲೆ ಗಂಗಾಧರಪ್ಪ, ಪ್ರಾರ್ಥನೆ ಮೋನಿಕಾ, ರುದ್ರೇಶ್ ಕೆಂಚಿಕೊಪ್ಪ, ಪ್ರಾಸ್ತವಿಕ ಎಂ.ಪಿ.ಎಂ.ವಿಜಯಾನಂದ ಸ್ವಾಮಿ, ವಂದನಾರ್ಪಣೆ ವಿಜಯೇಂದ್ರ ಮಹೇಂದ್ರಕರ್ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಇ.ಎಂ.ಮಂಜುನಾಥ, ಕೆ.ಚಂದ್ರಣ್ಣ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು,ಎನ್.ವಿ.ಬದರಿನಾಥ್ ಖಜಾಂಚಿ, ಎ.ಎಂ ಕೊಟ್ರೇಶ್ ಹೊನ್ನಾಳಿ ತಾಲೂಕು ಅಧ್ಯಕ್ಷರಾದ ಕೋರಿ ಯೋಗೀಶ್, ಕರ್ನಾಟಕ ಪತ್ರಕರ್ತರ ಸಂಘ ಹೊನ್ನಾಳಿ-ನ್ಯಾಮತಿ ಅಧ್ಯಕ್ಷರಾದ ಎ.ಕೆ.ಹಾಲೇಶ್ ಸೇರಿದಂತೆ ಇತರರು ಇದ್ದರು.
1.ನ್ಯಾಮತಿ ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ನ್ಯಾಮತಿ ತಾಲೂಕು ಘಟಕವನ್ನು ಗೋವಿನಕೋವಿ ಹಾಲಸ್ವಾಮಿ ಬೃಹನ್ಮಠದ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮಿಜೀ ಅವರು ವಹಿಸಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯ ಕಾರ್ಯದರ್ಶಿ ಜೆ.ಸಿ.ಲೊಕೇಶ್ ಇತರರು ಇದ್ದರು.
1ಎ.ನ್ಯಾಮತಿ ಪಟ್ಟಣದ ಮಹಂತೇಶ್ವರ ವಿರಶೈವ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ನ್ಯಾಮತಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ತಾಲೂಕು ಘಟಕದ ನಾಮ ಫಲಕದ ಅವಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಜೆ.ಸಿ.ಲೊಕೇಶ್, ಜಿಲ್ಲಾ ಅಧ್ಯಕ್ಷರಾದ ಇ.ಎಂ.ಮಂಜುನಾಥ, ನ್ಯಾಮತಿ ಸಂಚಾಲಕ ಎಂ.ಎಸ್.ಶಾಸ್ತ್ರಿ ಹೊಳೆಮಠ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ರಕ್ತನಿಧಿಯ ಹನುಮಂತಪ್ಪ ಸೇರಿದಂತೆ ಪತ್ರಕರ್ತ ಸಂಘದ ಸದಸ್ಯರು ಇದ್ದರು.

Leave a Reply

Your email address will not be published. Required fields are marked *