ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಸ್ವಚ್ಛ್ ಟಾಯ್ಕಾಥನ್” ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯು ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ನವೀನ ಸೃಜನಶೀಲ ಒಳಾಂಗಣ ಹಾಗೂ ಹೊರಾಂಗಣ ಆಟಿಕೆಗಳ ಮಾದರಿಗಳನ್ನು ರೂಪಿಸುವ ಕುರಿತಾಗಿ ಇದ್ದು, ಸ್ಪರ್ಧೆಯಲ್ಲಿ ಪಾಲಿಕೆ ವ್ಯಾಪ್ತಿಯ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗು ಸ್ಟಾರ್ಟ್ ಅಪ್ ಸಂಸ್ಥೆಗಳು ಭಾಗವಹಿಸಬಹುದಾಗಿದೆ.
ಅರ್ಜಿದಾರರು ಆನ್ಲೈನ್ ಲಿಂಕ್ hಣಣಠಿ://iಟಿಟಿivಚಿಣeiಟಿಜiಚಿ.mಥಿgov.iಟಿ ಮೂಲಕ ನ.11 ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸ ಬಹುದಾಗಿರುತ್ತದೆ. ಅತ್ಯುತ್ತಮ ಆಟಿಕೆಗಳ ಮಾದರಿಗಳಿಗೆ ಕೇಂದ್ರÀ ಸರ್ಕಾರದ ವತಿಯಿಂದ ಬಹುಮಾನವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಾಲಿಕೆ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.