ನ್ಯಾಮತಿ ತಾಲೂಕು ಸೋಗಿಲು ಗ್ರಾಮದಲ್ಲಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಶಿವಮೊಗ್ಗ ಇವರ ವತಿಯಿಂದ ಸಾಮೂಹಿಕ ಸತ್ತನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಮಲ್ಲಾಪುರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ,ಬ್ರಹ್ಮ ಡಾ// ಒಡೆಯರ್ ಚನ್ನ ಮಲ್ಲಿಕಾರ್ಜುನ ಶ್ರೀಗಳು ದೀಪವನ್ನು ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಯ ಭಾಷಣವನ್ನು ಡಾ// ಎಲ್ ಎಚ್ ಮಂಜುನಾಥ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂತರ ಮಾತನಾಡಿ ಡಾ ವೀರೇಂದ್ರ ಹೆಗಡೆಯವರು ಹಾಗೂ ಮಾತು ಶ್ರೀ ಡಾ. ಹೇಮಾವತಿ ವಿ ಹೆಗಡೆ ದಂಪತಿಗಳ ಮಾರ್ಗದರ್ಶನದೊಂದಿಗೆ ಸುಮಾರು 15 ವರ್ಷಗಳಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿಕೊಂಡು ನಮ್ಮ ಭಾರತ ದೇಶದ ಸನಾತ ಧರ್ಮವನ್ನು ಉಳಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಹೊನ್ನಾಳಿ ತಾಲೂಕಿನ ಮಾಜಿ ಶಾಸಕ ಡಿ ಜಿ ಶಾಂತನ ಗೌಡ್ರು ನಂತರ ಮಾತನಾಡಿ ನಮ್ಮ ಭಾರತ ದೇಶದ ಸನಾತನ ಧರ್ಮವನ್ನು ಪ್ರತಿಯೊಬ್ಬರೂ ಕೂಡ ದೇಶದ ಸಂಸ್ಕøತಿಯ ಉಳಿಸಿಕೊಂಡು ಆಚರಣೆಯನ್ನು ಮಾಡಿದಾಗ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ದೇಶದ ಸಂಸ್ಕೃತಿಯನ್ನು ಉಳಿಯಲಿಕ್ಕೆ ನಮ್ಮ ಮಹಿಳೆಯರ ಪಾತ್ರ ಅನನ್ಯವಾದದ್ದು ಎಂದು ತಿಳಿಸಿದರು.
ಶಾಸಕ ಎಂ ಪಿ ರೇಣುಕಾಚಾರ್ಯ ಅಡಿಕೆ ಗಿಡದ ಹೊಂಬಾಳೆ ಉದ್ಘಾಟಿಸಿ ನಂತರ ಮಾತನಾಡಿ ಮಲ್ಲಾಪುರ ವಲಯಕ್ಕೆ 37 ಗ್ರಾಮಗಳು ಸೇರುತ್ತವೆ ಆ ಗ್ರಾಮಕ್ಕೆ ಸೇರುವ ಮಹಿಳಾ ಸಂಘಗಳು ಸೇರಿ ಇಂದು ಸೋಗಿಲು ಗ್ರಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮಾಡಿ ಪ್ರತಿಯೊಂದು ಕುಟುಂಬವು 101ರು ಹಣವನ್ನು ಪಾವತಿ ಮಾಡಿ ಈ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣವನ್ನು ಶ್ರೀ ಡಿ ಪಿ ರಾಜಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀಮತಿ ನೀಲಾಬಾಯಿ ತತ್ಯಾನಾಯ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷರು ಚಟ್ನಳ್ಳಿ ಶ್ರೀ ಮಲ್ಲೇಶಪ್ಪ ಟಿ ಅಧ್ಯಕ್ಷರು ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ವ್ಯವಸ್ಥಾಪನ ಸಮಿತಿ ಮಲ್ಲಾಪುರ ವಲಯ, ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ಪ್ರಗತಿ ಬಂದು ಸ್ವಸಹಾಯ ಸಂಘಗಳು ಒಕ್ಕೂಟ ಮಲ್ಲಾಪುರ ವಲಯ, ಯೋಜನಾಧಿಕಾರಿಗಳು ಮೇಲ್ವಿಚಾರಕರು ,ಚಟ್ನಳ್ಳಿ ಗ್ರಾಮಸ್ಥರು ಮುಖಂಡರು ಮಹಿಳೆಯರು ಯುವಕರು ಸಹ ಭಾಗಿಯಾಗಿದ್ದರು