ಅ.20 ರಂದು ಗ್ರಾಮ ಒನ್ ಆಹಾರ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಗ್ರಾಮಾಂತರ ಮಟ್ಟದಲ್ಲಿರುವ ಎಲ್ಲಾ ನ್ಯಾಯಾಬೆಲೆ ಅಂಗಡಿಗಳಲ್ಲಿ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತ ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ಎಲ್ಲಾ ಪಡಿತರ ಫಲಾನುಭವಿಗಳಿಗೆ ಶಿಬಿರಗಳ ಮೂಲಕ ನೋಂದಣಿಯನ್ನು ಹಮ್ಮಿಕೊಳ್ಳಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನೋಂದಣಿಯಾದ ಬಿ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 5 ಲಕ್ಷದವರೆಗೆ ಮತ್ತು ಎ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 1.5 ಲಕ್ಷದವರೆಗೆ ಅಥವಾ ಚಿಕಿತ್ಸೆಯ 30%ರಷ್ಟು ನಗದು ರಹಿತ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ ಹಾಗೂ ಈ ಆಭಾ ಕಾರ್ಡುದಾರನ ಚಿಕಿತ್ಸೆಯ ಎಲ್ಲಾ ಮಾಹಿತಿಯು ಈ ಕಾರ್ಡಿನೊಂದಿಗೆ ಅಡಕವಾಗಿರುತ್ತದೆ.ಉಚಿತ ಕಾರ್ಡ್ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.