ನ್ಯಾಮತಿ ತಾಲ್ಲೂಕು ಕಚೇರಿಗೆ ಬುಧವಾರ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಅವರು ಸಾರ್ವಜನಿಕರ ಕುಂದುಕೊರತೆ ವಿಚಾರವಾಗಿ ಭೇಟಿ ನೀಡಿದಾಗ ಆಮ್ ಆದ್ಮಿ ಪಕ್ಷದ ರೈತ ಘಟಕ ಅಧ್ಯಕ್ಷ ಪಿ.ಜಿ.ನಾಗರಾಜ ಪಟೇಲ್ ಬೆಳೆ ಪರಿಹಾರ, ವಿಮೆ ಹಣ, ಬಗರ್‍ಹುಕುಂ, ಪೋಡಿ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದರು. ಹೊನ್ನಾಳಿ ನಗರ ಘಟಕ ಅಧ್ಯಕ್ಷ ಹರೀಶ ಜನನಿ, ಯರಗನಾಳ್ ಮಹೇಶ್ವರಪ್ಪ, ಲಕ್ಷ್ಮಿಕಾಂತ ಇದ್ದರು.