ಹೊನ್ನಾಳಿ ಪಟ್ಟಣದ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ತುಂಗಭದ್ರ ನದಿಯ ಮೂಲದಿಂದ ಪಟ್ಟಣಕ್ಕೆ ಮೊದಲನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ನಿರ್ಮಾಣ ಮಾಡುತ್ತಿರುವ ಕಾಮಗಾರಿಗಳನ್ನು ಬುಧವಾರ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಕರ್ನಾಟಕ ನೀರು ಸರಬರಾಜು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲು ಸೂಚಿಸಿದರು.
        ಹೊನ್ನಾಳಿ ಪಟ್ಟಣದ ಜನರಿಗೆ ನೀಡುತ್ತಿರುವ ಕುಡಿಯುವ ನೀರಿನ ಬಗ್ಗೆ ಜಲಸಂಗ್ರಹ ಮತ್ತು ಇತರೆ ವ್ಯವಸ್ಥೆಯನ್ನು ಪರಿಶೀಲಸಿ ಅತೀ ಹೆಚ್ಚು ಮಳೆ ಬಂದ ಹಿನ್ನೆಲೆಯಲ್ಲಿ ನದಿ ನೀರು ತುಂಬಿ ಹರಿಯುತ್ತಿದ್ದು, ನೀರು ಬಹಳ ಕಲುಷಿತಗೊಂಡಿರುವುದರಿಂದ ನೀರನ್ನು ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಮುನ್ನ ಸರಿಯಾದ ಪ್ರಮಾಣದಲ್ಲಿ ಅಲಂ ಬ್ಲೀಚಿಂಗ್ ಮತ್ತು ಅಗತ್ಯ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಸರಬರಾಜು ಮಾಡಲು ಸೂಚಿಸಿ ಸಾರ್ವಜನಿಕರಿಗೆ ಕುದಿಸಿ ಆರಿಸಿ ಉಪಯೋಗಿಸುವಂತೆ ಸಲಹೆ ನೀಡಲು ತಿಳಿಸಿದರು.
        ಹೊನ್ನಾಳಿ ಪುರಸಭೆಯ ಎಸ್.ಟಿ.ಪಿ ಘಟಕ ಮತ್ತು ಮಾಸಡಿ ಗ್ರಾಮದಲ್ಲಿರುವ ಎಸ್‍ಡಬ್ಲ್ಯೂಎಂ ಲ್ಯಾಂಡ್‍ಗೆ ಭೇಟಿ ನೀಡಿ, ವರ್ಮಿಕಾಂಪೆÇೀಸ್ಟ್ ಹಾಗೂ ಎಸ್‍ಡಬ್ಲ್ಯೂಎಂ ಡಿಪಿಆರ್‍ನಲ್ಲಿ ಅಳವಡಿಸಿಕೊಂಡಿರುವ ಮಿಷನರಿ ಶೆಡ್ ಹಾಗೂ ವಿಂಡೋಪ್ಲಾಟ್ ಫಾರಂ ಕಾಮಗಾರಿಯನ್ನು ವೀಕ್ಷಣೆ ಮಾಡಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ಹಾಗೂ ಉತ್ತಮ ಗುಣಮಟ್ಟದ ಯಂತ್ರಗಳನ್ನು ಅಳವಡಿಸಲು ಸೂಚನೆ ನೀಡಿದರು. ಕಸವಿಂಗಡಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಸಾರ್ವಜನಿಕರಿಂದ ಮನೆ ಮನೆ ಕಸ ಸಂಗ್ರಹಣೆಯ ಸಂದರ್ಭದಲ್ಲಿಯೇ ಹಸಿ ಕಸ ಹಾಗೂ ಒಣ ಕಸವನ್ನಾಗಿ ಬೇರ್ಪಡಿಸಿಕೊಂಡು ಕಸವಿಂಗಡಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
        ನ್ಯಾಮತಿ ಪಟ್ಟಣಕ್ಕೆ ಭೇಟಿ ನೀಡಿ, ಪಟ್ಟಣ ಪಂಚಾಯತಿಯ ಕುಡಿಯುವ ನೀರು ಸರಬರಾಜು ಘಟಕದ ಜಲಸಂಗ್ರಹಗಳನ್ನು ವೀಕ್ಷಿಸಿದರು. ಸಾರ್ವಜನಿಕರಿಗೆ ವಿತರಣೆ ಮಾಡುವ ನೀರಿಗೆ ಅಗತ್ಯ. ರಾಸಾಯನಿಕಗಳನ್ನು ಮಿಶ್ರಣ ಮಾಡಿ ಗುಣಮಟ್ಟವನ್ನು ಖಾತರಿಪಡಿಸಿಕೊಂಡು ವಿತರಿಸಲು ಸೂಚಿಸಿದರು. ನಂತರ ಪಟ್ಟಣದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಹಾಜರಿದ್ದ ಅಧಿಕಾರಿಗಳಿಗೆ ನಿಯಮಾನುಸಾರ ತುರ್ತಾಗಿ ಅಹವಾಲು ಅರ್ಜಿಗಳನ್ನು ವಿಲೇಪಡಿಸಲು ಸೂಚಿಸಿದರು.

Leave a Reply

Your email address will not be published. Required fields are marked *