ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಬಂಧ ಸ್ವರ್ಧೆ
67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸೂಚನೆಯ ಮೇರೆಗೆ ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರೌಢಶಾಲೆ ,ಪದವಿಪೂರ್ವ ಕಾಲೇಜು ಪದವಿ ಹಂತದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕನ್ನಡ ಪ್ರಬಂಧ ಸ್ವರ್ಧೆಯನ್ನು ಏರ್ಪಡಿಸಲಾಗಿದೆ. ದಿನಾಂಕ/22/10/2022ರಶನಿವಾರ ಮಧ್ಯಾಹ್ನ 2.00 ಗಂಟೆಗೆ ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಬಂಧ ಸ್ವರ್ಧೆ ಹಮ್ಮಿಕೊಳ್ಳಲಾಗಿದೆ
ಪ್ರಬಂಧ ಬರೆಯಲು ಬೇಕಾದ ಹಾಳೆಗಳು ಮತ್ತು ಪೆನ್ನು ಪರಿಷತ್ತಿನ ವತಿಯಿಂದ ನೀಡಲಾಗುತ್ತದೆ.
ಪ್ರಬಂಧ ಬರೆಯಲು ಕಾಲಾವಧಿ60 ನಿಮಿಷಗಳ(ಒಂದು ಗಂಟೆ)ಸಮಯ.
ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ.
ಆಯಾ ಆಯಾಶಾಲೆ ಕಾಲೇಜು ವತಿಯಿಂದ ವಿದ್ಯಾರ್ಥಿಗಳು ಸಂಖ್ಯೆಯನ್ನು 21/10/2022ರ ಶುಕ್ರವಾರ ಮಧ್ಯಾಹ್ನ 3.00ಯೊಳಗೆ ನೋಂದಾಯಿಸುವುದು.
ಸ್ವರ್ಧೆಯಲ್ಲಿ ವಿಜೇತರಾದವರಿಗೆ ತಾಲ್ಲೂಕು ಹಂತದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ವಿತರಿಸಿ ಸನ್ಮಾನಿಸಲಾಗುವುದು.
ಈ ಸ್ವರ್ಧೆಯಲ್ಲಿ ಭಾಗವಹಿಸಲು ಇಚ್ಘಿಸುವವರು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ ನೊಂದಾಯಿಸಲು ಕಡೆಯ ದಿನಾಂಕ/21/10/2022ರ ಶುಕ್ರವಾರ ಮಧ್ಯಾಹ್ನ 3.00
ಸ್ವರ್ಧೆ ವಿವರ
1)ಪ್ರೌಢಶಾಲಾ ವಿದ್ಯಾರ್ಥಿಗಳಿಗೆ:-ನನ್ನ ನೆಚ್ಚಿನ ಒಬ್ಬಜ್ಞಾನಪೀಠ ಪುರಸ್ಕ್ರತರು
2)ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ:-ಕನ್ನಡ ನಾಡು ನುಡಿಯ ಇತಿಹಾಸ
3)ಪದವಿ ವಿದ್ಯಾಥಿಗಳಿಗೆ:-ಕನ್ನಡ ನಾಡಿನ ಕಲೆ,ಸಾಹಿತ್ಯ,ಸಂಸ್ಕøತಿ
4)ಸಾರ್ವಜನಿಕರಿಗೆ:-ದಾವಣಗೆರೆ ಜಿಲ್ಲೆಯ ರಜತಮಹೋತ್ಸವದ ಹಿನ್ನೋಟ-ಮುನ್ನೋಟ
ಸಂಪರ್ಕಿಸಬೇಕಾದ ವಿಳಾಸ
ನ್ಯಾಮತಿ ತಾಲೂಕು ಕ.ಸಾ.ಪ ಡಿ.ಎಂ ಹಾಲಾರಾಧ್ಯ ಅಧ್ಯಕ್ಷರು ಮೊ.ನಂ.9916245625
ನಿಜಲಿಂಗಪ್ಪ ಜಿ. ನಿ.ಪೂ ಅಧ್ಯಕ್ಷರು ಮೊ ನಂ 8660734966
ಬಿ.ಜಿ.ಚೈತ್ರಾ ತಿಪ್ಪೇಸ್ವಾಮಿ ಕಾರ್ಯದರ್ಶಿ ಮೊ.ನಂ.9480665699