ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೆರವಾಗಿದೆ.ಈ ನಿಟ್ಟಿನಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಬಸವರಾಜ ಅಂಗಡಿ ಹೇಳಿದರು.
ತಾಲೂಕಿನ ಸುರಹೊನ್ನೆಯ ಶಾಂತಿನಗರ ಸರ್ಕಾರಿ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತಾನಾಡಿದರು ಜ್ಞಾನ ವಿಕಾಸ ಯೋಜನೆ ಮಹಿಳೆಯರಿಗೆ ಹೈನುಗಾರಿಕೆ, ಕುರಿ ಸಾಕಣಿಕೆ ಮೂಲಕ ಸ್ವ ಉದ್ಯೋಗದಿಂದ ಆರ್ಥಿಕ ಸಬಲೀಕರಣ ಸಾಧಿಸಲು ಉತ್ತೇಜನ ನೀಡಿದೆ .ಅಗತ್ಯ ಮಾರ್ಗದರ್ಶನ ಜೊತೆಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ: ಗ್ರಾಪಂ ಉಪಾಧ್ಯಕ್ಷೆ ರುಕ್ಮಿಣಮ್ಮ, ಶಿಕ್ಷಕ ಮಹೇಶ್ವರಪ್ಪ ಒಕ್ಕೂಟದ ಅಧ್ಯಕ್ಷೆ ಲತಾ ಮಾರುತಿ ಕುಂಬಾರ್,ಚಂದನ, ಜ್ಞಾನ ವಿಕಾಸ ಕೇಂದ್ರದ ಲಕ್ಷಮ್ಮ, ತಾಲೂಕು ಸಮನ್ವಯಾಧಿಕಾರಿ ಜಯಶ್ರೀ, ಶೋಭ, ಲತಾ ಇದ್ದರು.