ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ನಡೆಯುವ 19 ವರ್ಷದೊಳಗಿನ ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿಗಳಿಗೆ ರಾಜ್ಯ ಮಹಿಳಾ ವಾಲಿಬಾಲ್ ತಂಡದ ಆಯ್ಕೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಶಾಖೆಯಾದ ಕ್ರೀಡಾ ಕಲ್ಯಾಣದ ಮೂಲಕ ಅ.27 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ಏರ್ಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಹಿಳಾ ಕ್ರೀಡಾಪಟುಗಳು 1 ಜನವರಿ 2004 ಅಥವಾ ನಂತರ ಜನಿಸಿರಬೇಕು. ವಿವಿಧ ಜಿಲ್ಲೆಯ ಮಹಿಳಾ ವಾಲಿಬಾಲ್ ಕ್ರೀಡಾಪಟುಗಳು ಹಾಗೂ ಸ್ಥಳೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಬಹುದಾಗಿರುತ್ತದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣಭತ್ಯೆ ಹಾಗೂ ದಿನಭತ್ಯೆಯನ್ನು ಭರಿಸಲಾಗುವುದಿಲ್ಲ. ಆಯ್ಕೆಯಾದ ಕ್ರೀಡಾಪಟುಗಳು ತರಬೇತಿ ಶಿಬಿರ ಹಾಗೂ ಪಂದ್ಯಾವಳಿಗೆ ತೆರಳುವ ಪೂರ್ವ ಸಿದ್ಧತೆಯೊಂದಿಗೆ ಹಾಗೂ ಆಧಾರ್ ಕಾರ್ಡ್, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯೊಂದಿಗೆ ಬರಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *