ನ್ಯಾಮತಿ ಃ ಕನ್ನಡ ರಾಜ್ಯೋತ್ಸವ ಹೊಸಿಲಲ್ಲಿ ಹೊನ್ನಾಳಿ ಮಂಡಳ ಭಾರತೀಯ ಜನತಾ ಪಾರ್ಟೀ ನ್ಯಾಮತಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಆಯೋಜಿಸಿದ ಕೋಟಿ ಕಂಠ ಗಾಯನ ಹಾಗೂ ಮಾತಾಡು ಮಾತಾಡು ಕನ್ನಡ ಕಾರ್ಯಕ್ರಮ ಹಲವಾರು ಬಿಜೆಪಿ ಕಾರ್ಯಕರ್ತರು ವಿಜಭೃಣೆಯಿಂದ ನಡೆಯಿತು.
ಜನಪ್ರಿಯ ಕನ್ನಡ ನಾಡುನುಡಿಗೆ ಸಂಬಂಧಿಸಿದ ಜನಪ್ರಿಯ ಕನ್ನಡ ಹಾಡುಗಳಾದ ರಾಷ್ಟ್ರ ಕವಿ ಕುವೆಂಪು ಅವರ ವಿರಚಿತ ನಾಡಗೀತೆ ಹಾಗೂ ಬಾರಿಸು ಕನ್ನಡ ಡಿಂಡಿಮ,ಹುಯಿಲುಗೋಳ ನಾರಾಯಣರಾವ್ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಹಾಗೂ ಡಿ.ಎಸ್.ಕರ್ಕಿ ಅವರ ಹಚ್ಚೆವು ಕನ್ನಡದ ದೀಪಾ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕುಎಂಬ ಹಾಡುಗಳನ್ನು ವಿದ್ಯಾರ್ಥಿಗಳು ಹಾಗೂ ಗಾಯಕರು ಹಾಡಿದರು,
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸುರೇಶ್ , ಮುಖಂಡರಾದ ಎಸ್.ಪಿ.ರವಿಕುಮಾರ್, ಸಿ.ಕೆ.ರವಿಕುಮಾರ್ , ಕೆ.ವಿ.ಚನ್ನಪ್ಪ , ರಂಗಪ್ಪ , ಸಿ.ಆರ್.ಶಿವಾನಂದ , ಹವಳದ ಲಿಂಗರಾಜು , ವೀರಣ್ಣ , ಎ.ಬಿ.ಹನುಮಂತಪ್ಪ , ನಟರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.