ನ್ಯಾಮತಿ ತಾಲೂಕು ಒಡೆಯರ ಹತ್ತೂರು ಗ್ರಾಮದಲ್ಲಿ ಇಂದು ನ್ಯಾಮತಿ ತಾಲೂಕು ವೀರಶೈವ ಪಂಚಮಸಾಲಿ ಸಮಾಜದ ವತಿಯಿಂದ 199ನೇ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವ ಕಾರ್ಯಕ್ರಮವನ್ನು ಚನ್ನಪ್ಪ ಸ್ವಾಮಿಯ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು .ಇದರ ಉದ್ಘಾಟನೆಯನ್ನು ಚನ್ನಪ್ಪ ಮಾಸ್ಟರ್ ಮಾಳಿಗೇರ್ ನೆರವೇರಿಸಿದರು .
ಅಧ್ಯಕ್ಷತೆಯನ್ನು ಶ್ರೀ ಗುರು ಶಾಂತಪ್ಪ ಬಳೆಗಾರ ತಾಲೂಕ್ ಪಂಚಮಸಾಲಿ ಸಮಾಜದ ಅಧ್ಯಕ್ಷರು ವಹಿಸಿದ್ದರು.
ಪ್ರಾಸ್ತಾವಿಕ ನುಡಿ ಹಲಗೇರಿ ವೀರೇಶಪ್ಪ ನಡೆಸಿಕೊಟ್ಟರು.
ದೇವತಾ ಪ್ರಾರ್ಥನೆ ಒಡೆಯರ ಹತ್ತೂರು ಚನ್ನಪ್ಪ ನಡೆಸಿಕೊಟ್ಟರು.
ಮೆಸ್ಕಾಂ ನಿರ್ದೇಶಕ ರುದ್ರೇಶ್ ಹೊಸೂರ್ ಮಾತನಾಡಿ ಕಿತ್ತೂರಾಣಿ ಚೆನ್ನಮ್ಮ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ಸಂತೋಷದ ವಿಷಯ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎಂ ಜೆ ವಾಗೀಶ್ ಮಾತನಾಡಿ ಕಿತ್ತೂರಾಣಿ ಚೆನ್ನಮ್ಮನವರ 200ನೇ ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ಒಡೆರತೂರು ಗ್ರಾಮದಲ್ಲಿ ಜೆಎಚ್ ಪಟೇಲ್ ಮತ್ತು ಕಿತ್ತೂರಾಣಿ ಚೆನ್ನಮ್ಮ ನವರ ಭಾವಚಿತ್ರವನ್ನು ಸಮಾಜದ ಬಾಂಧವರಿಂದ ವಂತಿಕೆ ಸಂಗ್ರಹಿಸಿ ಪ್ರತಿಮೆಯನ್ನ ಮಾಡಿಸಲಾಗುವುದು ಎಂದು ಹೇಳಿದರು.
ಕಿತ್ತೂರಾಣಿ ಚೆನ್ನಮ್ಮನವರ ಭಾವಚಿತ್ರವನ್ನು ಫ್ಯಾಕ್ಟರಿನಲ್ಲಿ ಇಟ್ಟುಕೊಂಡು ವಿಜಯೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ವೀರಗಾಸೆ ಹೆಣ್ಣು ಮಕ್ಕಳ ಕುಣಿತ ಜನಪದ ಕಲಾ ತಂಡಗಳೂಂದಿಗೆ ಸಮಾಜದ ಬಾಂಧವರು ಮೆರವಣಿಗೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಗುರುಶಾಂತಪ್ಪ ಬಳಗಾರ್. ಹಲಗೇರಿ ವೀರೇಶ್. ಜಿಲ್ಲಾ ಗೌರವಾಧ್ಯಕ್ಷ ಎಂ ಡಿ ಪಂಚಾಕ್ಷರಪ್ಪ. ಎನ್ ಎನ್ ನಾಗರತ್ನ. ವನಜಾಕ್ಷಮ್ಮ. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲೇಶ್, ಉಪನ್ಯಾಸಕ ಅಶೋಕ್ ಇನ್ನು ಮುಂತಾದವರು ಸಮಾಜದ ಬಾಂಧವರು ಹಾಗೂ ಮಹಿಳೆಯರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *