ನ್ಯಾಮತಿ: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನಡೆದ 67ನೇ ಕನ್ನಡರಾಜ್ಯೋತ್ಸವ ಸಮಾರಂಭವನ್ನು ತಹಶೀಲ್ದಾರ್ ಎಂ.ರೇಣುಕಾ ಉದ್ಘಾಟಿಸಿದರು.
ನ್ಯಾಮತಿಯಲ್ಲಿ ಅದ್ದೂರಿಯಾಗಿ ನಡೆದ ಕನ್ನಡರಾಜ್ಯೋತ್ಸವ
ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕು
ನ್ಯಾಮತಿ:
ಕನ್ನಡ ಅನ್ನುವುದು ಬರೀ ಭಾಷೆಯಲ್ಲ ಅಕ್ಷರ ರೂಪದ ಅಮೃತ,ನಾಡಿನ ಎಷ್ಟೋ ಮಂದಿ ಹಿರಿಯರು, ಕವಿ,ಸಾಹಿತಿಗಳು ಬರೆದಿಟ್ಟು ಹೋದಂತಹ ಹೊನ್ನ ಲಿಪಿ ಎಂದು ತಹಶೀಲ್ದಾರ್ ಎಂ. ರೇಣುಕಾ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ 67ನೇ ಕನ್ನಡರಾಜ್ಯೋತ್ಸವ ಸಲುವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನುಇಲ್ಲಿನ ಪ್ರತಿಯೊಬ್ಬರು ಕಲಿಯಬೇಕು, ಬರೆಯಬೇಕು, ಪ್ರತಿಯೊಂದು ಕಚೇರಿಯಲ್ಲಿ ಕನ್ನಡ ಬಳಸುವಂತಾಗಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ ಅವರು ಮಾತನಾಡಿ, ಹಿಂದೆ ಕನ್ನಡಕ್ಕೋಸ್ಕರ ಮಹಾನುಭಾವರು ಸೈನಿಕರಂತೆ ಕೆಲಸ ಮಾಡಿದ್ದರಿಂz Àಇಂದು ನಾವು ಕನ್ನಡರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ ಎಂದರು.
ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸP Àಕುಬೇರಪ್ಪ,ಎಸ್‍ಐ ಪಿ.ಎಸ್.ರಮೇಶ, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಮಾತನಾಡಿದರು.
ಇದಕ್ಕೋ ಮೊದಲು ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಕನ್ನಡ ಭುವನೇಶ್ವರಿಯ ಭಾವಚಿತ್ರದೊಂದಿಗೆ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು. ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಇಒ ಮಂಜುನಾಥಸ್ವಾಮಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಕಸಾಪ ವತಿಯಿಂದ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಸಾಪ ವತಿಯಿಂದ, ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಸಿಒ ಬಿ.ಕೆ.ಕೊಟ್ರೇಶಿ, ಸಿಡಿಪಿಒ ಮಹಾಂತಸ್ವಾಮಿ ಪೂಜಾರ, ವಿಶ್ವ ಕರವೇ ಅಧ್ಯಕ್ಷ ಪ್ರಶಾಂತ, ನವುಲೆ ಗಂಗಾಧರ, ಕಸಾಪ ಪದಾಧಿಕಾರಿಗಳಾದ ಜಿ.ನಿಜಲಿಂಗಪ್ಪ, ಬಿ.ಜಿ.ಚೈತ್ರಾ, ಬಸವರಾಜಪ್ಪ, ಕೆ.ಎಂ.ಬಸವರಾಜ, ಡಿ.ಎಂ.ವಿಜೇಂದ್ರ ಮಹೇಂದ್ರಕರ, ಬಂಡಿಈಶ್ವರಪ್ಪ, ಚಂದ್ರೇಗೌಡ, ಜಿ.ಕುಬೇರಪ್ಪ, ಲೋಕೇಶ್ವರಯ್ಯ, ಭಾಗ್ಯಲಕ್ಷ್ಮೀ, ಬಿದರಗಡ್ಡೆ ಸತೀಶ, ಸೋಮಸುಂದರರಾಜಆರಸ್, ದೈಹಿಕ ಶಿಕ್ಷಕರು ಇದ್ದರು.