ಹುಣಸಘಟ್ಟ: ಹೊನ್ನಾಳಿ ತಾಲೂಕು ಕುಳಗಟ್ಟೆ ಗ್ರಾಮ ಪಂಚಾಯಿತಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆಸಿದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರತ್ನಮ್ಮ ರಾಜಪ್ಪ ಅವಿರೋಧವಾಗಿ ಆಯ್ಕೆಗೊಂಡರು.
ಈ ಹಿಂದೆ ಚಂದ್ರಪ್ಪ ಬಂಗಾರಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ರಾಜಪ್ಪನವರ ಒಂದು ನಾಮಪತ್ರ ಹೊರತುಪಡಿಸಿ ಬೇರಾವ ನಾಮಪತ್ರಗಳು ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ಕೃಷಿ ನಿರ್ದೇಶಕಿ ಪ್ರತಿಮಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಅವಿರೋಧ ಘೋಷಿಸಿದರು.
ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಪಿಡಿಒ ರಾಮಪ್ಪ, ಕಾರ್ಯದರ್ಶಿ ಹೊನ್ನಪ್ಪ, ಗ್ರಾ ಪಂ ಸದಸ್ಯರುಗಳಾದ ಚಂದ್ರಪ್ಪ ಬಂಗಾರಿ, ಎಂ ಆರ್ ಹನುಮಂತಪ್ಪ, ಎಪಿ ಹಾಲೇಶಪ್ಪ ರಾಮಪ್ಪ , ಹನುಮಮ್ಮ ಬಸವರಾಜಯ್ಯ ರುದ್ರನಗೌಡ ಶಾಂತಮ್ಮ ಲಲಿತಮ್ಮ ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.