ನ್ಯಾಮತಿ: ತಾಲೂಕು ಟಿ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ರಣದುರ್ಗಮ್ಮ ದೇವಿ ಹಾಗೂ ಶ್ರೀ ಬೆಳಗುತ್ತಿ ದುರ್ಗಮ್ಮ ದೇವತೆಗಳ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯಗಳ ಗೃಹ ಪ್ರವೇಶ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ದೇವರ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಾಲಯ ಗೃಹ ಪ್ರವೇಶ ಉದ್ಘಾಟನೆಯನ್ನು ಹೊನ್ನಾಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನಿಧ್ಯದಲ್ಲಿ ಪೂಜಾ ಕೈಂ ಕರ್ಯ ಹಾಗೂ ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.
ಶಾಸಕರಾದ ಎಂಪಿ ರೇಣುಕಾಚಾರ್ಯ ಈ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಿ ಜಿ ವಿಶ್ವನಾಥ್, ಎಸ್ ಕೆ ನಾಗರಾಜಪ್ಪ, ಶ್ರೀರಾಮು, ಮಹೇಶ್ವರಪ್ಪ ಎಸ್, ಜಯಪ್ಪ ಊರಿನ ಮುಖಂಡರು, ಮಹಿಳೆಯರು, ಊರಿನ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.