ನ್ಯಾಮತಿ ಃ ತೊಟ್ಟಿಲು ಕಾರ್ಯಕ್ರಮದ ಊಟ ಮಾಡಿದ 43 ಮಂದಿಗೆ ವಾಂತಿ ಬೇದಿ ಆಗಿರುವ ಘಟನೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ತಾಲೂಕಿನ ಆರುಂಡಿ ಗ್ರಾಮದ ಕಬ್ಬಾಯಿ ರಂಗಪ್ಪನವರ ಮನೆಯಲ್ಲಿ ಮಗ ಪ್ರಕಾಶ್ ಮಗನ ತೊಟ್ಟಿಲು ಕಾರ್ಯಕ್ರಮವನ್ನು ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಬಂದ ಅತಿಥಿ ಬಂಧು ಬಳಗಕ್ಕೆ ಮಧ್ಯಾಹ್ನಕ್ಕೆ ಲಾಡು, ಮೆಂತೆ ರೈಸ್, ಅನ್ನ ಸಾಂಬಾರು ಮುಂತಾದ ತಿನಿಸುಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಭಾನುವಾರ ಮಧ್ಯಾಹ್ನ ಭೋಜನ ಸೇವಿಸಿದ ಗ್ರಾಮದ 42ಮಂದಿ ಮತ್ತು ಚಟ್ನಹಳ್ಳಿ ಗ್ರಾಮದ ಒಬ್ಬರಿಗೆ ಸೋಮವಾರ ಬೆಳಗಿನ ಜಾವದಿಂದ ವಾಂತಿ ಬೇದಿ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡವರು ಆರುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಪಡದು ಹೆಚ್ಚಿನ ಚಿಕಿತ್ಸೆಗಾಗಿ ನ್ಯಾಮತಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿದೆ.
ನ್ಯಾಮತಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 23 ಮಹಿಳೆಯರು , 15 ಗಂಡು ಮಕ್ಕಳು ವಾಂತಿ ಬೇದಿಯಿಂದ ದಾಖಲಾಗಿರುವ ಅನಾರೋಗ್ಯ ಪೀಡಿತರಿಗೆ ವೈಧ್ಯಾಧಿಕಾರಿ ಡಾ.ರೇಣುಕನಂದ ಎಂ.ಮೆಣಸಿನಕಾಯಿ, ಸವಳಂಗದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.
ಚಿಕಿತ್ಸೆಗಾಗಿ ದಾಖಲಾಗಿರುವನ್ನು ತಾಲೂಕು ವೈದ್ಯಾಧಿಕಾರಿ ಕೆಂಚಪ್ಪ ಬಂತಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ, ಮುಖಂಡರುಗಳಾದ ಸುರೆಂದ್ರಗೌಡ, ಎನ್.ಜೆ.ವಾಗೀಶ್ ನುಚ್ಚಿನ್ , ಗುಂಡೂರು ಲೋಕಶ್ , ಎಂ.ಕರಿಬಸಪ್ಪ, ಮಣಿಪಾಲ ಪಂಚಾಕ್ಷರಪ್ಪ, ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕೋಡಿಕೊಪ್ಪದ ಶಿವಪ್ಪ, , ಕೆಂಚಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರುಂಡಿ ಪ್ರಕಾಶ್ ಪ.ಪಂ.ಮುಖ್ಯಾಧಿಕಾರಿ ಬಿ.ಕೆ.ಕೊಟ್ರೇಶ್ ಸೇರಿದಂತೆ ಆರೋಗ್ಯಕೇಂದ್ರಕ್ಕೆ ಬೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು.