ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮತ್ತು ಮಹಿಳಾ ಸೇವಾ ಸಮಾಜ ದಾವಣಗೆರೆ ಇವರ ಸಹಯೋಗದಲ್ಲಿ ನವಂಬರ್ 09 ರಂದು ಬೆಳಗ್ಗೆ 10 ಗಂಟೆಗೆ ಮಹಿಳಾ ಸೇವಾ ಸಮಾಜ, ಪ್ರವಾಸಿಉ ಮಂದಿರ ರಸ್ತೆ ದಾವಣಗೆರೆ ಇಲ್ಲಿ ಕಾನೂನು ಅರಿವು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನದ ಸಂಬಂಧ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮತ್ತು ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೀತಿ ಸದ್ಗುರು ಸದರಜೋಷಿ ಉದ್ಘಾಟಿಸುವರು, ಮಹಿಳಾ ಸೇವಾ ಸಮಾಜದ ಪ್ರಾಂಶುಪಾಲರಾದ ರವಿಕುಮಾರ್ ಅಧ್ಯಕ್ಷತೆ ವಹಿಸುವರು.
ಮುಖ್ಯತಿಥಿಗಳಾಗಿ ಮಹಿಳಾ ಸೇವಾ ಸಮಾಜದ ಸಹ ಕಾರ್ಯದರ್ಶಿ ಮತ್ತು ವಕೀಲರಾದ ಮಂಜುಳ.ಐ.ಕೆ, ನಿರ್ದೇಶಕರಾದ ನೀಲಮ್ಮ ಸುಭಾಷ್ ಬೆಳ್ಳುಳ್ಳಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.