ನ್ಯಾಮತಿ: ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಚರ್ಚೆ ಶುರುವಾಗುತ್ತಿದ್ದಂತೆಯೇ ಮುಸ್ಸೇನಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ಮುಸ್ಸೇನಾಳ ಗ್ರಾಮದಲ್ಲಿ ಬರುವ ಮನೆಗಳಿಗೆ ಈ ಸ್ವತ್ತು ಬರುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ತಾಲೂಕು ಮಟ್ಟದ ತಾಲೂಕ ನಿರ್ವಹಣಾ ಅಧಿಕಾರಿ ಮತ್ತು ತಹಸಿಲ್ದಾರ್ ಗಮನಕ್ಕೆ ತಂದು ಬೇಗನೆ ಈ ಸ್ವತ್ತು ಕೊಡ್ಸುವ ವ್ಯವಸ್ಥೆಯನ್ನು ಮಾಡಬೇಕೆಂದುದು ಪಿ ಡಿ ಓ ರವರಿಗೆ ತಿಳಿಸಿದರು.
ಜಮಾ ಖರ್ಚು ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರವೀಣ್ ಪಿ ಆರ್ ನಟರಾಜಪ್ಪ ನಾಗೇಶ್ ನಾಯಕ್ ಶ್ರೀಮತಿ ಜಯಶ್ರೀ ರವರು ಒಟ್ಟಿಗೆ ಸೇರಿ ನಾವು ಹಿಂದೆ ತ್ರೈಮಾಸಿಕ ಸಬೆ ನಡೆದ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಲವಾರು ಅರ್ಜಿ ಕೊಟ್ಟಿದ್ದೆವು. ಅದು ಇಲ್ಲಿವರೆಗೂ ವಿಲೇವಾರಿ ಆಗಿಲ್ಲ, ಯಾಕೆ ತಾತ್ಸಾರ ಮನೋಭಾವನೆ ಅಧಿಕಾರಿಗಳು ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕಾಶ್ ನಾಯ್ಕ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರಕೃತಿ ವಿಕೋಪದ ಅಡಿಯಲ್ಲಿ ಬಂದ ಮನೆಗಳು ನಮ್ಮ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗಮನಕ್ಕೆ ಬಾರದೆ ಪ್ರತಿಯೊಂದು ಹಳ್ಳಿಗಳಿಗೆ ಸರ್ಕಾರದಿಂದ ಬಂದಂತ (ಎ)ಕೇಟಗರಿ ಬಿ ಕೆಟಗರಿ ಸಿ ಕೆಟಗರಿ ಬಿದ್ದ ಮನೆಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಸ್ಸೇನಾಳ ಗ್ರಾಮದಲ್ಲಿ ನೀರು ಘಂಟೆಯು ಮೂರು ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು ಸಹ ಅವರನ್ನ ಪುನಃ ಹೊಸದಾಗಿ ನೀರಗಂಟಿ ಬರುವತನಕ ನಮ್ಮೂರಲ್ಲಿ ನೀರು ಬಿಡಲಿಕ್ಕೆ ಕೆಲಸಕ್ಕೆ ನೇಮಿಸಿಕೊಂಡಿದ್ದೆವು ಇಲ್ಲಿಯವರೆಗೂ ಅವರಿಗೆ ಸಂಬಳವನ್ನು ಕೊಟ್ಟಿಲ್ಲ ಎಂದು ಗ್ರಾಮ ಅಭಿವೃದ್ಧಿ ಅಧಿಕಾರಿಗೆ ತರಾಟೆ ತೆಗೆದುಕೊಂಡರು. ಅದಕ್ಕೆ ಉತ್ತರವಾಗಿ ಪಿಡಿಓ ರವರು ಒಂದು ತಿಂಗಳ ಸಂಬಳವನ್ನು ಮಾಡಿಕೊಡುತ್ತೇನೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅನಿತಾ, ಉಪಾಧ್ಯಕ್ಷರಾದ ಗೋವಿಂದ್ ರಾಜ್, ಪಿಡಿಒ ಸೋಮಶೇಖರಪ್ಪ ಎಚ್ ಎಸ್, ಸದಸ್ಯರಾದ ನೇತ್ರಮ್ಮ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.