ನ್ಯಾಮತಿ: ಪಟ್ಟಣದಲ್ಲಿರುವ ತಾಲೂಕ ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಹಾಗೂ ತಾಲೂಕ ಪಂಚಾಯಿತಿ ಇವರ ವತಿಯಿಂದ ಮತದಾರ ಪಟ್ಟಿಯ ವಿಶೇಷ ಮತ್ತು ಸಂಕ್ಷಿಪ್ತ ಪರಿಷ್ಕರಣೆ ಮತದಾರರ ಜಾಗೃತಿ ಆಂದೋಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನ ತಹಶೀಲ್ದಾರ್ ಶ್ರೀಮತಿ ರೇಣುಕಾ ವಹಿಸಿದ್ದರು. ನ್ಯಾಮತಿ ಪಟ್ಟಣದ ಪ್ರಮುಖ ರಾಜ ಬೀಧಿಗಳಲ್ಲಿ ತಾಲೂಕ್ ಆಡಳಿತ ಇತರೆ ಇಲಾಖೆಯ ಮತ್ತು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಬ್ಯಾನರ್ ಬೆಂಟಿಂಕ್ ಹಿಡಿದುಕೊಂಡು ಘೋಷಣೆ ಕೂಗುತ್ತಾ ಮತದಾನದ ಜಾಗೃತಿಯನ್ನ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಹಸಿಲ್ದಾರ ಶ್ರೀಮತಿ ರೇಣುಕ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಬಿ ಕೆ ಕೊಟ್ರೇಶ್, ಚಿರಸ್ತಿದಾರ್ ಚಂದ್ರಶೇಖರ್, ತಾಲೂಕ್ ಆಡಳಿತ ಮತ್ತುಪಟ್ಟಣ ಪಂಚಾಯಿತಿ ತಾಲೂಕ್ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದರು.