ನ್ಯಾಮತಿ: ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜ್ ಎಂಬವರು ಪ್ರಕೃತಿ ವಿಕೋಪದಿಂದ ಮಳೆಯಿಂದ ಹಾನಿಗೊಳಗಾಗಿ ಮನೆಗಳು ಬಿದ್ದಿರುವ ಪರಿಹಾರದ ಅರ್ಜಿಗಳು ಮತ್ತು ಬೆಳೆ ಪರಿಹಾರದ ಅರ್ಜಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳದೆ ಜನರಿಗೆ ಉಡಾಫೆ ಉತ್ತರ ಕೊಡುತ್ತಿರುವ ಬಸನಹಳ್ಳಿ ಗ್ರಾಮಕ್ಕೆ ಬರದೇ ಬೇರೆ ಕಡೆ ಇದ್ದು ಫೆÇೀನಿನಲ್ಲಿ ಇವಾಗ ಬರುತ್ತೇನೆ ಅವಾಗ ಬರುತ್ತೇನೆ ಎಂದು ಹೇಳುತ್ತಾ ಸಮಯ ಕಳೆಯುವ ಬಸವನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ನಾಡಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಿರತ ಮನವಿ ಪತ್ರ ಸ್ವೀಕರಿಸಿದ ಮಾನ್ಯ ದಂಡಾಧಿಕಾರಿಗಳಾದ ಶ್ರೀಮತಿ ರೇಣುಕಾ ನಂತರ ಮಾತನಾಡಿ ಬಸವನಹಳ್ಳಿ ಗ್ರಾಮದ ಜನರಿಗೆ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ ನಂತರ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಂಡರು.
ಈ ಸಂದರ್ಭದಲ್ಲಿ
ತಹಸಿಲ್ದಾರ್ ಶ್ರೀಮತಿ ರೇಣುಕಾ, ಚಿರಸ್ತೆದಾರ್ ಚಂದ್ರಶೇಖರ್, ಆರ ಸುಧೀರ್ ,ಸಂತೋಷ್ ಆರ್ ಐ ,ಮತ್ತು ಬಸವನಹಳ್ಳಿ ಗ್ರಾಮಸ್ಥರು ಸಹ ಇದ್ದರು.

Leave a Reply

Your email address will not be published. Required fields are marked *