ಚಂದ್ರಶೇಖರ ಸಾವಿನ ಬಗ್ಗೆ ಹತ್ತು ಹಲವಾರು ಊಹಾಪೆÇೀಹಗಳಿದ್ದು, ಈಗ ಪ್ರಾಥಮಿಕ ಹಂತದ ತನಿಖೆಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಇನ್ನಿತರ ಎರಡು ವರದಿ ಬಂದ ನಂತರ ಘಟನೆ ಕುರಿತು ಯಾವ ಮಟ್ಟದ ತನಿಖೆ ಕೈಗೊಳ್ಳಬೇಕು. ಎಂಬ ಸ್ಪಷ್ಟತೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಬುಧವಾರ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಮನೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷಾ ವರದಿ ವಿಧಿ ವಿಜ್ಞಾನ ಪ್ರಯೋಗಲಯ ವರದಿ ಹಾಗೂ ಪ್ರಕರಣದ ಮರುಸೃಷ್ಟಿ ತನಿಖಾ ವರದಿ ಬಂದ ನಂತರ ಕೂಲಂಕುಶವಾಗಿ ಪರಿಶೀಲನೆ ಮಾಡಿ ಮುಂದಿನ ತನಿಖೆಯ ಕುರಿತು ಅಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ ಎಂದರು.
ನಾನು ರೇಣುಕಾಚಾರ್ಯರವರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಚಂದ್ರಶೇಖರ್ನನ್ನು ಕಳೆದುಕೊಂಡ ಕುಟುಂಬ ಅವರ ನೆನಪಿನಲ್ಲಿ ಜನರಿಗೆ ಹಲವಾರು ಕಾರ್ಯಕ್ರಮಗಳ ಆಯೋಜನೆ ಮೂಲಕ ಚಿರಸ್ಥಾಯಿಯನ್ನಾಗಿಸಲಿದ್ದಾರೆ. ಭಗವಂತ ಚಂದ್ರಶೇಖರ್ ಆತ್ಮಕ್ಕೆ ಶಾಂತಿ ಹಾಗೂ ಇಡೀ ಕುಟುಂಬ ಮತ್ತು ಕ್ಷೇತ್ರದ ಜನತೆಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೇಡುವೆ ಎಂದರು.
ಕಳೆದ ಒಂದು ವಾರದಿಂದ ಇಡೀ ಕ್ಷೇತ್ರದ ಜನ ದುಃಖದಲ್ಲಿದ್ದು, ಚಂದ್ರಶೇಖರ್ ಅಂತ್ಯಕ್ರಿಯೆಯಲ್ಲಿ ತಂಡೋಪ ತಂಡವಾಗಿ ಆಗಮಿಸಿದ ಚಿಕ್ಕಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಕಣ್ಣೀರು ಸುರಿಸಿದ್ದಾರೆ. ಇದು ಚಂದ್ರಶೇಖರ್ಗಳಿಸಿರುವ ಪ್ರೀತಿ, ವಿಶ್ವಾಸ ಹಾಗೂ ಸಂಬಂಧಗಳ ಸಂಕೇತ. ಒಂದು ಭವ್ಯ ಭವಿಷ್ಯ ಚಂದ್ರಶೇಖರನಿಗಿತ್ತು. ಸಮಾಜಕ್ಕೆ ಅವರು ಮಾಡುತ್ತಿದ್ದ 24*7 ಸೇವೆ ಹಾಗೂ ಎಲ್ಲರೊಂದಿಗೂ ಸಮಾನವಾಗಿ ಬೆರೆಯುತ್ತಿದ್ದ ಗುಣವನ್ನು ಕಂಡು ದೇವರು ತನ್ನಲಿಗೆ ಕರೆದುಕೊಂಡಿದ್ದಾನೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ, ನಗರÀಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ, ಉಪಸ್ಥಿತರಿದ್ದರು.