ದಾವಣಗೆರೆ ತಾಲ್ಲೂಕಿನ ಆನಗೋಡು ಹೋಬಳಿಯ ಹುಣಸೇಕಟ್ಟೆ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ ಮೆಕ್ಕೆಜೋಳ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಮೇರಿಕಾ ರಾಯಭಾರಿ ಕಛೇರಿ ರಾನ್ ವೆರ್ಡೋಂಕ್, ಹಾಗೂ ದೆಹಲಿಯ ಅರುಣ್ ಸಿಂಗ್, ಇವರುಗಳು ನೆರವೇರಿಸಿದರು. ಜಂಟಿ ಕೃಷಿ ನಿರ್ದೇಶಕರು ಶ್ರೀನಿವಾಸ್ ಚಿಂತಾಲ್, ಇವರು ಜಿಲ್ಲೆಯ ಮೆಕ್ಕೇಜೋಳ ಬೆಳೆಯ ವಾಸ್ತವ ಸ್ಥಿತಿ ಹಾಗೂ ಇತರೆ ಮಾಹಿತಿಯನ್ನು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕರು ಶ್ರೀಧರಮೂರ್ತಿ ಡಿ.ಎಂ., ಇವರು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ರಾನ್ ವೆರ್ಡೋಂಕ್‍ರವರು ಮೆಕ್ಕೆಜೋಳ ಬೆಳೆದ ರೈತರೊಂದಿಗೆ ಮೆಕ್ಕೆಜೋಳ ಬೆಳೆ ಉತ್ಪಾದಕತೆ ಹಾಗೂ ನಿರ್ವಹಣೆ ಕುರಿತು ಸಂವಾದ ನಡೆಸಿದರು. ಹಿಂಗಾರು ಹಂಗಾಮಿಗೆ ಎನ್.ಎಫ್.ಎಸ್.ಎಂ. ಯೋಜನೆಯಡಿ ರಾಗಿ ಬೆಳೆಯುವ ರೈತರಿಗೆ ಪ್ರಾತ್ಯಕ್ಷತೆಗಾಗಿ ರಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ. ಬಸವರಾಜಪ್ಪ, ಉಮಾದೇವಿ, ಆನಗೋಡು ಹೋಬಳಿಯ ಕೃಷಿ ಅಧಿಕಾರಿಗಳಾದ ಶ್ರೀನಿವಾಸ ಆರ್., ಯೋಗೇಶಪ್ಪ, ಸಹಾಯಕ ಕೃಷಿ ಅಧಿಕಾರಿ ಎಂ.ಎನ್. ಸುರೇಶ್ ಮತ್ತು ಆತ್ಮ ಯೋಜನೆಯ ರೇಷ್ಮಾ ಹಾಜರಿದ್ದರು.