ನ್ಯಾಮತಿ: ತಾಲೂಕ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಇಂದು ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 535ನೇ ಜಯಂತೋತ್ಸವ ಹಾಗೂ ವೀರ ವನಿತೆ ಒನಕೆ ಓಬವ್ವ ನವರ ಜಯಂತೋತ್ಸವ ಕಾರ್ಯಕ್ರಮವನ್ನು ತಾಲೂಕ ಕಚೇರಿ ಆವರಣದಲ್ಲಿಂದು ಆಚರಿಸಲಾಯಿತು.
ತಹಸಿಲ್ದಾರ್ ಶ್ರೀಮತಿ ರೇಣುಕ ಮತ್ತು ಕುರುಬ ಸಮಾಜದ ಮುಖಂಡರು ಸೇರಿದಂತೆ ದಾಸರಲ್ಲಿ ಶ್ರೇಷ್ಠ ದಾಸ ಭಕ್ತ ಕನಕದಾಸರ ಭಾವಚಿತ್ರಕ್ಕೆ ಮತ್ತು ವೀರ ವನಿತೆ ಒನಕೆ ಓಬವ್ವನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಭಕ್ತಿಯನ್ನು ಸಮರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಮತಿ ರೇಣುಕಾ,ಹಳಧಪ್ಪ ಸುರಹೊನ್ನೆ, ನ್ಯಾಮತಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮರಿ ಕಣ್ಣಪ್ಪ, ಸಮಾಜದ ಮುಖಂಡರು ಹಾಗೂ ತಾಲೂಕ್ ಆಡಳಿತದ ಸಿಬ್ಬಂದಿ ವರ್ಗದವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *