ವಿಶೇಷಚೇತನರಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸ್ಪೂರ್ತಿ (ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ) ದಾವಣಗೆರೆ ಮತ್ತು ಓಮೆಗಾ ರಿಹಾಬ್ಲಟೇಷನ್ ಪೌಂಡೇಷನ್, ಬೆಂಗಳೂರು,  ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು  ವಿತರಿಸಲಾಗುವುದು.  
   ಅವಶ್ಯಕತೆ ಇರುವ ವಿಕಲಚೇತನರು 2 ಭಾವಚಿತ್ರ, ಅಂಗವಿಕಲರ ಗುರುತಿನ ಚೀಟಿ & ಯು.ಡಿ.ಐ.ಡಿ ಕಾರ್ಡ್ ಪ್ರತಿ & ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿ.ಪಿ.ಎಲ್/ಎ.ಪಿ.ಎಲ್ ಕಾರ್ಡ್ ಪ್ರತಿಯನ್ನು ಡಿಸೆಂಬರ್ 22 ರೊಳಗಾಗಿ ಸ್ಪೂರ್ತಿ (ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆ),  #297, ದೇವರಾಜ್ ಅರಸ್ ಬಡಾವಣೆ, ‘ಎ’ ಬ್ಲಾಕ್  ಹಳೇ ಆರ್.ಟಿ.ಓ ಕಛೇರಿ, ದಾವಣಗೆರೆ -577006   ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು. ನೋಂದಣೆ ಮಾಡಿಕೊಂಡವರಿಗೆ ಕ್ರಚರ್ಸ್, ವಾಕರ್ಸ್, ಟ್ರೈಪ್ಯಾಡ್, ವೀಲ್‍ಚೇರ್, ಆರ್ಟಿಫಿಸಿಯಲ್ ಲಿಂಬ್, ಆರ್ಟಿಫಿಸಿಯಲ್ ಲೆಗ್, ಆರ್ಟಿಫಿಸಿಯಲ್ ಹ್ಯಾಂಡ್ ಮತ್ತು ಕ್ಯಾಲಿಪರ್ಸ್ ಮಾತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಿಕಟ ಪೂರ್ವ ಮಕ್ಕಳ ಆಯೋಗ, ಹಾಗೂ ಸದಸ್ಯರು ನಿರ್ದೇಶಕರಾದ ಕೆ.ಬಿ. ರೂಪನಾಯ್ಕ, ದೂರವಾಣಿ ಸಂಖ್ಯೆ -9448976910, 8884415151ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ.ಕೆ.ಕೆ. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *