ಹೊನ್ನಾಳಿ:
ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಮಕ್ಕಳ ಮೇಲೆ ಇಟ್ಟುಕೊಂಡಿದ್ದ ಕಾಳಜಿ, ಪ್ರೀತಿಯಿಂದಾಗಿ ನೆಹರು ಹುಟ್ಟಿದ ದಿನವಾಗಿರುವ ನ.14ರಂದು ಎಲ್ಲೆಡೆ ಸಡಗರದಿಂದ ಮಕ್ಕಳ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಇಲ್ಲಿನ ಭಾರತೀಯ ವಿದ್ಯಾ ಸಂಸ್ಥೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪ್ರೀತಂ ಪಾಟೀಲ್ ಹೇಳಿದರು.
ಭಾರತೀಯ ವಿದ್ಯಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‍ನ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಳಗಟ್ಟೆ ಕೋರಿ ಯೋಗೀಶ್ ಮಾತನಾಡಿ, ಶಾಲಾ ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಎಲ್ಲಾ ಶಾಲೆಗಳಲ್ಲೂ ನಡೆಯಬೇಕಿದೆ. ಸಮಾಜದಲ್ಲಿ ನಡೆಯುವ ಅನೇಕ ರೀತಿಯ ಅನಾಚಾರ,ಭ್ರಷ್ಟಾಚಾರ ಇನ್ನಿತರೆ ಸಮಾಜಘಾತುಕ ಕೃತ್ಯಗಳ ವಿರುದ್ಧ ಪ್ರತಿಭಟನೆ ನಡೆಸಬೇಕಿದೆ. ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಶಾಲೆಗಳಲ್ಲಿ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬರುವ ದಿನಗಳಲ್ಲಿ ಸಂಸ್ಕøತಿ, ಪರಿಸರ ಉಳಿಸಿ-ಬೆಳೆಸುವ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ಪ್ರಿಯಾಂಕ, ಅಮೃತ, ಸಹನ, ನಿಸರ್ಗ, ಪ್ರೇರಣಾ ಮಾತನಾಡಿದರು.
ವಿದ್ಯಾರ್ಥಿಗಳಾದ ಪುಷ್ಪಾ, ಸಿದ್ಧೇಶ್, ರಾಜೇಶ್ವರಿ, ರಕ್ಷಿತ, ಪ್ರಿಯಾ, ಜೀವನ್, ಕಲ್ಪನ, ಅಮೃತ, ರಶ್ಮಿ, ಮೋನಿಕ, ಚಂದನ್, ಶಿವರಾಜ್, ಪ್ರೀತಿ, ಪ್ರವೀಣ್, ಮಕ್ಕಳ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಗಿರೀಶ್ ನಾಡಿಗ್, ರೂಪಾ ಕರಿಸಿದ್ಧಪ್ಪ, ಮುಖ್ಯ ಶಿಕ್ಷಕರಾದ ತಿಮ್ಮೇಶ್, ಪುನೀತ್, ಸಹ ಶಿಕ್ಷಕರಾದ ಮಧು, ನಾಗಮ್ಮ, ಶರತ್ ಇತರರು ಇದ್ದರು.

Leave a Reply

Your email address will not be published. Required fields are marked *