ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದು  ಅಂತರಾಷ್ಟ್ರೀಯ ಪರ್ವತಾರೋಹಿ ವಿಕ್ರಮ್ ಸಿ ಅವರು ಹೇಳಿದರು.
ನಗರದ ಕವಾಯತು ಮೈದಾನದಲ್ಲಿ   ಬುಧವಾರ ದಾವಣಗೆರೆ ಜಿಲ್ಲಾ ಪೆÇಲೀಸ್ ಇಲಾಖೆ ವತಿಯಿಂದ ಆಯೋಜಿಸಲಾದ  ಜಿಲ್ಲಾ ಪೆÇೀಲಿಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪರ್ವತರೋಹಣ ಎಂಬುದು ಕಷ್ಟಕರವಾಗಿದ್ದರು, ಅμÉ್ಟೀ ಆಕರ್ಷಣೀಯ ಮತ್ತು ತುಂಬಾ ಸರಳವಾಗಿದೆ. ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಪರ್ವತರೋಹವನ್ನು  ಯಶಸ್ವಿಗೊಳಿಸಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆ ತುಂಬಾ ಸಹಕಾರಿಯಾಗಿದೆ. ಈ ಕ್ರೀಡಾಕೂಟದಲ್ಲಿ ಎಲ್ಲರೂ ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದ ಭಾಗವಹಿಸಿ ಎಂದು ಶುಭ ಕೋರಿದರು.
   ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಸಿ ಬಿ ರಿಷ್ಯಂತ್ ಮಾತನಾಡಿ,  ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಕೆಲಸದ ಒತ್ತಡ ಕಡಿಮೆ ಆಗುವುದರ ಜೊತೆಗೆ, ಉತ್ತಮ ಆರೋಗ್ಯ ಲಭಿಸುತ್ತದೆ ಹಾಗೂ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.
ಕಳೆದ ಬಾರಿ ಕ್ರೀಡಾ ಚಾಂಪಿಯನ್ ಡಿಎಆರ್ ಸಿಬ್ಬಂದಿ ಎ.ಪಿ.ಜಯಣ್ಣ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಉಪ ವಿಭಾಗದಿಂದ ಮೂರು ತಂಡಗಳು ಹಾಗೂ ಡಿಎಆರ್ ವಿಭಾಗದಿಂದ ಎರಡು ತಂಡಗಳು ಸೇರಿ ಒಟ್ಟು 5 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ರಾಮಗೊಂಡ ಬಿ ಬಸರಗಿ ಸ್ವಾಗತಿಸಿ, ವಂದಿಸಿದರು. ನರವೇರಿಸಿದರು.

Leave a Reply

Your email address will not be published. Required fields are marked *