ಹುಣಸಘಟ್ಟ: ತೊಗರಿ ಸಾಂಪ್ರದಾಯಿಕ ಬೆಳೆ ಪದ್ಧತಿಗೆ ಬದಲಾಗಿ ನಾಟಿ ಪದ್ಧತಿ ತಂತ್ರಜ್ಞಾನದಿಂದ ರೈತರು ತೊಗರಿ ಅಧಿಕ ಇಳುವರಿ ಪಡೆಯಬಹುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ ಹೇಳಿದರು.
ಹೊನ್ನಾಳಿ ತಾಲೂಕಿನ ಹಟ್ಟಿಹಾಳು ಗ್ರಾಮದಲ್ಲಿ 2022-23ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಶುಕ್ರವಾರ ನಾಗಮ್ಮ ಬಸಪ್ಪನವರ ಹೊಲದಲ್ಲಿ ಹಮ್ಮಿಕೊಂಡ ತೊಗರಿ ಬೆಳೆ ನಾಟಿ ಪದ್ಧತಿ ಆಧಾರಿತ ಪ್ರಾತಕ್ಷತೆ ತರಬೇತಿ ಹಾಗೂ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ, ಕಾಯಿ ಹಂತದ ತೊಗರಿ ಬೆಳೆ ವೀಕ್ಷಿಸಿ ಮಾತನಾಡಿದ ಅವರು ಯಥೇಚ್ಛವಾಗಿ ಬಳಸುತ್ತಿರುವ ರಾಸಾಯನಿಕಗಳನ್ನು ಕಡಿಮೆ ಮಾಡದೇ ಇದ್ದರೆ ಪ್ರತಿಯೊಬ್ಬ ರೈತರು ಕರಾಳ ದಿನವನ್ನು ಅನುಭವಿಸಬೇಕಾಗುತ್ತದೆ. ರೈತರು ಎಷ್ಟೇ ಉತ್ಪಾದನೆ ಮಾಡಿದರು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ರೈತರು ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಉತ್ತಮ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡಬೇಕು. ಈ ಮೂಲಕ ರೈತರಿಗೆ ಮಾದರಿಯಾಗಬೇಕು. ರೈತರು ವ್ಯವಸಾಯವನ್ನು ಶ್ರದ್ಧೆಯಿಂದ ಮಾಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಮಹಮ್ಮದ್ ರಫಿ ಮಾತನಾಡಿ ಪ್ರತಿಯೊಬ್ಬ ರೈತರು ಸಹಜ ಕೃಷಿ, ಸಾವಯವ ಕೃಷಿ, ಸಮಗ್ರ ಬೇಸಾಯ ಪದ್ಧತಿಗಳು, ಸಮಗ್ರ ಕೀಟ ನಿರ್ವಹಣಾ ಕಾರ್ಯಕ್ರಮಗಳನ್ನು ಸಮಗ್ರ ಪೋಷಕಾಂಶ ನಿರ್ವಹಣೆಯಂತಹ ಎಲ್ಲಾ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ರೈತರು ಕೃಷಿ ಮಾಡಿದ್ದೆ ಆದಲ್ಲಿ ಕೃಷಿಯಲ್ಲಿ ನಷ್ಟ ಖಂಡಿತವಾಗಿಯೂ ಇರುವುದಿಲ್ಲ ಎಂದರು.
ತಾಂತ್ರಿಕ ಯೋಜನಾಧಿಕಾರಿ ಡಾ. ನಾಗರಾಜ್ ಮಾತನಾಡಿ ದೇಶದಲ್ಲಿ ಬದಲಾದ ಹವಮಾನದಿಂದಗುವ ಪರಿಣಾಮಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ವಿವಿಧ ಹಂತದ ಹವಮಾನ ಮುನ್ಸೂಚನೆ ನೀಡಲು ಹಾಗೂ ಕೃಷಿಯನ್ನು ಲಾಭದಾಯಕವಾಗಿಸಲು ಮತ್ತು ರೈತರಿಗೆ ಸಂಯೋಜಿತ ಕೃಷಿ ಸಲಹೆಗಳನ್ನು ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಬೆರಳ ತುದಿಯಲ್ಲಿ ಹವಾಮಾನ ಇಲಾಖೆಯು ಬಹಳಷ್ಟು ಪ್ರಯತ್ನಪಟ್ಟಿದ್ದು ಇದರಲ್ಲಿ ಯಶಸ್ವಿಯನ್ನು ಸಹ ಕಂಡಿದೆ ಎಂದರು.
ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸಾಹಸಹಳ್ಳಿ ಕೃಷಿ ಇಲಾಖೆಯ ಶಶಿಧರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ವಿನೂತ, ಗ್ರಾಂಪಂ ಸದಸ್ಯ ಮಂಜುನಾಥ್, ರೈತ ಬೆಳೆಗಾರರಾದ ಉಜನಿಪುರ ಬಸಣ್ಣ, ಬೆನಕನಾಯ್ಕ ಸೇರಿದಂತೆ ಕ್ಯಾಸನಕೆರೆ, ಹಟ್ಟಿಯಾಳು, ಚೀಲಾಪುರ ಗ್ರಾಮಗಳ ರೈತರು ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *