ನ್ಯಾಮತಿ ಃ ಯಾವುದೇ ಭಕ್ತರು ಅಥವಾ ಸಾರ್ವಜನಿಕರು ಅನಾರೋಗ್ಯದಿಂದ ಜೀವ ಕಳೆದುಕೊಳ್ಳುವ ಪ್ರಸಂಗ ಎದುರಾಗಬಾರದು ಎನ್ನುವ ಉದ್ದೇಶದಿಂದ 100 ಹಾಸಿಗೆ ಸೌಲಭ್ಯವಿರುವ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಭಕ್ತರ ಸಹಕಾರದಿಂದ ಹೊನ್ನಾಳಿ ಪಟ್ಟಣದಲ್ಲಿ ನಿರ್ಮಿಸಲಾಗುವುದು ಎಂದು ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಕುಂಬಾರ ಬೀದಿಯ ಶ್ರೀ ಅಮ್ಮನಮರದ ದೇವಿ ದೇಗುಲದ 20 ನೇ ವರ್ಷದ ವಾರ್ಷಿಕೋತ್ಸವ ,ಕಾರ್ತಿಕೋತ್ಸವದ ಅಂಗವಾಗಿ ಶ್ರೀ ಅಮ್ಮನಮರದ ದೇವಿ ದೇಗುಲ ಸೇವಾ ಟ್ರಸ್ಟ್‍ಸೋಮವಾರ ಆಯೋಜಿಸಲಾಗಿದ್ದಶ್ರೀ ಅಮ್ಮನ ಮರದ ದೇವಿಗೆ ಮಹಾರುದ್ರಾಭಿಷೇಕ, ಕಲ್ಯಾಣೋತ್ಸವ ಸಾಮೂಹಿಕ ವಿವಾಹ, ಹಾಗೂ ಧರ್ಮ ಸಭೆಯ ಕಾರ್ಯಕ್ರಮ ಉಧ್ಘಾಟಿಸಿ ಮಾತಾನಾಡಿದರು.
ಲಿಂಗೈಕ್ಯ ಒಡೆಯರ ಚಂದ್ರಶೇಕರ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಮುಂದಿನ 2023 ರ ಕಾರ್ತಿಕ ಮಾಸದಲ್ಲಿ 1 ಕೋಟಿ ದೀಪದ ಕಾರ್ತಿಕೋತ್ಸವದ ಸಂಕಲ್ಪ ಮಾಡಿದ್ದು ದೀಪೋತ್ಸವಕ್ಕೆ ಈಗಾಗಲೇ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿ ಸಮಿತಿಯನ್ನು ಮಾಡುತ್ತಿದ್ದು ಭಕ್ತರು ದೀಪೋತ್ಸವದ ಹಣ ಸಂಗ್ರಹವಾಗುವ ಹಣವನ್ನೆಲ್ಲ 100 ಹಾಸಿಗೆ ಸೌಲಭ್ಯವಿರುವ ಒಂದು ಸುಸಜ್ಜಿತ ಆಸ್ಪತ್ರೆ ಹಾಗೂ ಇಂಟರ ನ್ಯಾಸನಲ್ ಪಠ್ಯ ಹೊಂದಿದ ಶಾಲೆ ಹಾಗೂ ವಿದ್ಯಾರ್ಥಿಗಳ ವಸತಿಗಾಗಿ ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ವಿನಿಯೋಗಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ , ದಾವಣಗೆರೆ ಡೆಪ್ಯೂಟಿ ಸೂಪರಿಂಡೆಂಟ್ ಆಫ್ ಪೂಲೀಸ್ ಇಂಟೆಲಿಜಿನ್ಸ್ ಕುಂಬಾರ್ ಸೋಮಲಿಂಗಯ್ಯ , ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ ಎನ್.ಜೆ.ರಾಜಶೇಖರ್ ಸುಭಾಷ್ , ಆಖಿಲ ಭಾರತ ವೀರಶೈವ ಲಿಂಗಾಯತ್ ಮಹಾಸಭಾದ ಅವಳಿ ತಾಲೂಕು ಅಧ್ಯಕ್ಷ ಹವಳದ ಲಿಂಗರಾಜುಪಾಪಾಣ್ಣ , ನುಚ್ಚೀನ್ ವಾಗೀಶ್ , ಹೊಸಮನೆ ಮಲ್ಲಿಕಾರ್ಜುನ ಕುಂಬಾರ್ , ಶಿಕ್ಷಕ ಪುಟ್ಟಪ್ಪ , ಪ್ರವೀಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿಶಾಸಕ ಡಿ.ಜಿ.ಶಾಂತನಗೌಡ , ತಾಲೂಕು ಸಾಧು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಕೋಡಿಕೊಪ್ಪದ ಜಿ.ಶಿವಪ್ಪ ಶ್ರೀ ಅಮ್ಮನಮರದ ದೇವಿ ದೇಗುಲ ಸೇವಾ ಟ್ರಸ್ಟ್‍ನ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅಮ್ಮನಮರದ ದೇವಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಹೂಸಮನೆ ಶಂಕರಪ್ಪ ಕುಂಬಾರ ವಹಿಸಿದ್ದರು.

Leave a Reply

Your email address will not be published. Required fields are marked *