ನ್ಯಾಮತಿ:- ಕೆಂಚಿಕೊಪ್ಪ ಗ್ರಾಮದಲ್ಲಿಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು
ಶಾಸಕ ಎಂ ಪಿ ರೇಣುಕಾಚಾರ್ಯರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ಕೆಂಚಕೊಪ್ಪ ಹೈಸ್ಕೂಲ್ ಮೈದಾನದಿಂದ ಹೂವುಗಳಿಂದ ಅಲಂಕರಿಸಿ ಶೃಂಗರಿಸಿದ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಮುತ್ತೈದೆಯರಿಂದ ಕುಂಭಮೇಳ ಮತ್ತು ಡೊಳ್ಳು ಕುಣಿತದೊಂದಿಗೆ ಅದ್ದೂರಿಯಾಗಿ ಊರಿನ ಗ್ರಾಮಸ್ಥರು ನನಗೆ ಬರಮಾಡಿಕೊಂಡಿದ್ದು ಬಹಳ ಸಂತೋಷ ಮತ್ತು ನನ್ನ ಪೂರ್ವಜನ್ಮದ ಪುಣ್ಯ ಎಂದು ತಿಳಿಸಿದರು. ಕೆಂಚಿಕೊಪ್ಪ ಗ್ರಾಮದಲ್ಲಿ 2022ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೈ ಸ್ಕೂಲ್ ನಿಂದ ಸ್ಮಶಾನ ರಸ್ತೆಯವರಿಗೆ 4ಲಕ್ಷ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ, ಶಾಲಾ ಕಂಪೌಂಡು 2 ಬಾಕ್ಸ್ ಡ್ರೈನೇಜ್ 2ದನದ ಕೊಟ್ಟಿಗೆ 9 ಸೋಕ್ ಫಿಟ್ 4 ನಮ್ಮ ಹೊಲ ನಮ್ಮ ದಾರಿ 4 ಮಳೆ ನೀರು ಕೊಯ್ಲು 1 ಅಡಿಕೆ ಕಾಮಗಾರಿಗಳು ಸೇರಿದಂತೆ ಸುಮಾರು ಒಂದು ಕೋಟಿ 15 ಲಕ್ಷಕ್ಕಿಂತ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗಿದೆ ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ತಾಲೂಕು ಮಟ್ಟದ ಅಧಿಕಾರಿ ವರ್ಗದವರು ತಹಶೀಲ್ದಾರ್ ಶ್ರೀಮತಿ ರೇಣುಕ ನೇತೃತ್ವದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿದರು.
ತಹಸಿಲ್ದಾರ್ ಶ್ರೀಮತಿ ರೇಣುಕಾ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ನಂತರ ಮಾತನಾಡಿ ಕೆಂಚುಕೊಪ್ಪ ಆರುಂಡಿ ಈ ಎರಡು ಗ್ರಾಮಗಳಲ್ಲಿ ಪ್ರಕೃತಿ ವಿಕೋಪದ ಅಡಿಯಲ್ಲಿ ಹಾನಿಗೊಳಗಾದ ಮನೆಗಳು ಎ1 (4) ಬಿ1(4) ಬಿ 2(8 ) ಒಟ್ಟಾಗಿ16 ಮನೆಗಳನ್ನು ವಿತರಿಸಲಾಗಿದೆ ಹಾಗೂ ಅದರ ಜೊತೆಗೆ ಸಂಧ್ಯಾ ಸುರಕ್ಷಾ ಯೋಜನೆ 42 ನೀರ್ಗತಿಕ ವಿಧವಾ ವೇತನ 4 ಅಂಗವಿಕಲ ಪೆÇೀಷಣಾ ವೇತನ 13 ಇಂದಿರಾಗಾಂಧಿ ವೃದ್ಯಾಪ್ಯ ವೇತನ 21 ಒಟ್ಟಾಗಿ 80 ಯೋಜನೆಗಳನ್ನು ಸಾರ್ವಜನಿಕರಿಗೆ ಈಗಾಗಲೇ ತಲುಪಿಸಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಇ ಇ ಓ ರಾಮಭೋವಿ ಸಮಾಜ ಕಲ್ಯಾಣ ಅಧಿಕಾರಿ ಉಮಾ ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ ಹಾಗೂ,ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.