ನ್ಯಾಮತಿ :ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿಗಳ ಜೊತೆಯಲ್ಲಿ ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಾಹಿತಿಗಳಾದ ವೀರಭದ್ರಪ್ಪತೆಲಗಿ, ಎಸ್.ಆರ್.ಬಸವರಾಜಪ್ಪಇದ್ದಾರೆ.
ನಮ್ಮ ಭಾಷೆಕನ್ನಡ ಬಹಳ ಮಾಧುರ್ಯವಾದಂತಹ ಭಾಷೆ, ನಾವು ಭಾಷೆಯನ್ನು ಗೌರವಿಸುವಂತಹ, ಪ್ರೀತಿಸುವಂತಹ ಕೆಲಸ ನಾವು ಮಾಡಬೇಕು ಎಂದು ದಾವಣಗೆರೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಹೇಳಿದರು.
ಪಟ್ಟಣದ ಕಾಳಿಕಾಂಬ ದೇವಸ್ಥಾನದಲ್ಲಿ ಶುಕ್ರವಾರಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾಲ್ಲೂಕು ಮಟ್ಟದ ಕವಿಗೋಷ್ಟಿ, ಕನ್ನಡ ನಾಡು ನುಡಿಯ ಉಪನ್ಯಾಸ, ಕಸಾಪ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಉಪನ್ಯಾಸಕ ಸಾಹಿತಿಎಸ್.ಆರ್.ಬಸವರಾಜಪ್ಪ ಮಾತನಾಡಿ, ಕವನ ರಚನೆ ವಿಶೇಷವಾದಂತಹ ಸೃಜನಾತ್ಮಕ ಕಲೆಯಾಗಿದ್ದು, ಇದರಲ್ಲಿ ಪದಕಟ್ಟುವ ಭಾವನೆಗಳನ್ನು ಹಿಡಿದಿಡುವಂತಹ ಕೆಲಸ ಇಂದಿನ ಕವಿಗಳು ಮಾಡಬೇಕಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕವನ ರಚನೆಯ ವಿಶೇಷ ಕೌಶಲ್ಯಗಳ ಬಗ್ಗೆ ಕಾವ್ಯ ಕಮ್ಮಟಗಳನ್ನು ಏರ್ಪಡಿಸುವಂತೆ ಸಲಹೆ ನೀಡಿದರು.
ಕನ್ನಡದತೇರು ಭಾಷಾಭಿಮಾನದ ಬೇರು, ಕನ್ನಡದಅಸ್ಮಿತೆಯನ್ನು ಎತ್ತಿ ಹಿಡಿದಎಲ್ಲಾ ಕವಿಗಳ ಕವನಗಳು ಉತ್ತಮವಾಗಿದ್ದವು, ಕವಿಗಳು ಸೂಕ್ಷ್ಮ ಜೀವಿಗಳು, ಕಣ್ಣಿಗೆಕಂಡಂತ ಪ್ರತಿಯೊಂದು ವಸ್ತುವಿನ ಬಗ್ಗೆ ಕವಿಗಳಾಗಿ ಚಿಂತಿಸಬೇಕುಎಂದು ಸಾಹಿತಿ ಮತ್ತು ವಿಮರ್ಶಕ ವೀರಭದ್ರಪ್ಪತೆಲಗಿ ಕವನಗಳ ಮೌಲ್ಯಗಳನ್ನು ತಿಳಿಸಿದರು.
ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕಿನ ಶಿಕ್ಷಕರು, ಉಪನ್ಯಾಸಕರು, ಹಿರಿಯ ಕವಿಗಳು ಒಳಗೊಂಡಂತೆ ಸುಮಾರು 20 ಜನ ಕವಿಗಳು ಕವನ ವಾಚನ ಮಾಡಿದರು.
ಕವಿಗೋಷ್ಠಿಗೆ ಸಹಕರಿಸಿದ ಸಾಹಿತಿಗಳಾದ ಯು.ಎನ್.ಸಂUನಾಳಮಠ, ಪಿ.ಎಂ.ಸಿದ್ದಯ್ಯ, ನಾಗರಾಜಅರ್ಕಾಚಾರ್, ದೊಡ್ಡೇರಿಆನಂದ, ಕವಿರಾಜ, ನಾಗರಾಜಾಚಾರ್ಅವರನ್ನುಡಿ.ಎಂ. ವಿಜೇಂದ್ರ ಮಹೇಂದ್ರಕರ, ಚಂದನ, ಎನ್.ಬಿ.ರವೀಂದ್ರಚಾರ್ಅವರು ಅಭಿನಂದಿಸಿದರು.
ಲೋಕೇಶ್ವರಯ್ಯ, ಚಂದ್ರೇಗೌಡ, ಜಿ.ಕುಬೇರಪ್ಪ, ಎಂ.ಎಸ್.ಜಗದೀಶ, ಸಿ. ಬೋಜರಾಜ,ಸತೀಶ ಬಿದರಗೆಡ್ಡೆಇದ್ದರು.
ಕಸಾಪ ಪದಾಧಿಕಾರಿಗಳಾದ ಜಿ. ನಿಜಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು, ಎಸ್.ಜಿ.ಬಸವರಾಜಪ್ಪ ಸ್ವಾಗತಿÀಸಿದರು, ಕೆ.ಎಂ.ಬಸವರಾಜ ನಿರೂಪಿಸಿದರು, ವೆಂಕಟೇಶನಾಯ್ಕ ವಂದಿಸಿದರು.