ನ್ಯಾಮತಿಯಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ವತಿಯಿಂದ ಆದಿಶಕ್ತಿ ಜ್ಞಾನವಿಕಾಸ ಕೇಂದ್ರ, ಸಿರಿದಾನ್ಯ ಆಹಾರ ಪದ್ಧತಿ
ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಸದಸ್ಯರಾದ ಲಿಂಗರಾಜ ಹವಳದ
ಮತ್ತು ಎಂ.ಯು.ನಟರಾಜ ಉದ್ಘಾಟಿಸಿದರು.
ಸಮಾಜದಲ್ಲಿ ಮಹಿಳೆಯರು ಮಾನಸಿಕ ಒತ್ತಡಗಳಿಂದ ಜೀವನ
ನಡೆಸುತ್ತಾರೆ. ಇವುಗಳನ್ನು ಎದುರಿಸಲು ಮಾನಸಿಕ ಮತ್ತು ದೈಹಿಕವಾಗಿ
ಆರೋಗ್ಯವಂತರಾಗಿರಬೇಕು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ
ಲಿಂಗರಾಜ ಹವಳದ ಸಲಹೆ ನೀಡಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾನುವಾರ ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಆದಿಶಕ್ತಿ ಜ್ಞಾನವಿಕಾಸ
ಕೇಂದ್ರದ ಉದ್ಘಾಟನೆ ಮತ್ತು ಸಿರಿದಾನ್ಯ ಆಹಾರ ಪದ್ಧತಿ ಮತ್ತು
ಮಾರುಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವಿಕಾಸ ಯೋಜನೆಯ ಸಮನ್ವಯಾಧಿಕಾರಿ ಜಯಶ್ರೀ ಮಾತನಾಡಿ,
ಧರ್ಮಸ್ಥಳ ಅಮ್ಮನವರು ಮಹಿಳೆಯರಿಗಾಗಿ 4 ದಶಕಗಳಿ ಹಿಂದೆಯೇ
ಜ್ಞಾನವಿಕಾಸ ಕೇಂದ್ರವನ್ನು ಆರಂಭಿಸಿದ್ದು, ಒಕ್ಕೂಟದಲ್ಲಿ 20ನೇ ಕೇಂದ್ರ ಈ
ಭಾಗದಲ್ಲಿ ಆರಂಭವಾಗುತ್ತಿದ್ದು, ಮಹಿಳೆಯರ ಆರೋಗ್ಯ ನೈರ್ಮಲ್ಯ,
ಶಿಕ್ಷಣ, ಕೌಟುಂಬಿಕ ಸಾಮಾಥ್ರ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಸಿರಿದಾನ್ಯ ಜಿಲ್ಲಾ ಮಾರುಕಟ್ಟೆ ವ್ಯವಸ್ಥಾಪಕ ಸಂತೋಷ, ಸಿರಿದಾನ್ಯ ಬಳಕೆಯಿಂದ
ವಿವಿಧ ರೋಗಗಳಿಗೆ ಪರಿಹಾರ ಸಿಗಲಿದ್ದು, ಅವುಗಳನ್ನು ಕ್ರಮವರಿತು
ಬಳಸುವ ಬಗ್ಗೆ ಮಾಹಿತಿ ನೀಡಿ, ಸದಸ್ಯರೊಂದಿಗೆ ಚರ್ಚಿಸಿದರು.
5 ಮಹಿಳಾ ಸಂಘಟನೆಗಳು ಸೇರಿ ಆದಿಶಕ್ತಿ ಜ್ಞಾನವಿಕಾಸ ಕೇಂದ್ರ
ಆರಂಭಿಸಿದ್ದು, ಪ್ರತಿ ತಿಂಗಳು ಒಂದು ದಿನ ಎರಡು ತಾಸು ಮಹಿಳೆಯರ
ಸಮಸ್ಯೆಗಳ ಬಗ್ಗೆ ಚರ್ಚೆ ಮತ್ತು ಪರಿಹಾರ ಕಂಡುಕೊಳ್ಳುವ ಸಲುವಾಗಿ
ಜ್ಞಾನ ವಿಕಾಸ ಕೇಂದ್ರ ಕೆಲಸ ಮಾಡಲಿದೆ ಎಂದು ಅಧ್ಯಕ್ಷತೆ ವಹಿಸಿ ಒಕ್ಕೂಟದ
ಅಧ್ಯಕ್ಷೆ ಜೋಗದ ಲೀಲಾವತಿ ಹೇಳಿದರು.
ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಎಂ.ಯು.ನಟರಾಜ, ಕಸಾಪ ಅಧ್ಯಕ್ಷ
ಡಿ.ಎಂ.ಹಾಲಾರಾಧ್ಯ, ಎ ಒಕ್ಕೂಟದ ಅಧ್ಯಕ್ಷೆ ರೇಖಾ, ವಲಯ ಮೇಲ್ವಿಚಾರಕ ಡಿ.
ಗಣಪತಿ ಉಪಸ್ಥಿತರಿದ್ದರು.
ವಿವಿಧ ಮಹಿಳಾ ಸಂಘಟನೆಗಳು ಸಿರಿದಾನ್ಯದಿಂದ ತಯಾರಿಸಿದ ವಿವಿಧ ಆಹಾರ
ಪದಾರ್ಥಗಳನ್ನು ಸದಸ್ಯರಿಗೆ ಉಣಬಡಿಸಲಾಯಿತು.
ದಾಕ್ಷಾಯಣಿ ಪ್ರಾರ್ಥಿಸಿದರು, ಉಷಾ ಸ್ವಾಗತಿಸಿದರು, ಜೋಗz ಉಮಾ ವಂದಿಸಿದರು,