ಹೊನ್ನಾಳಿ-ನ್ಯಾಮತಿ ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ತಾಲೂಕಿನ ಕೋಣನತಲೆ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗೋವಿನಕೋವಿ ವಲಯದ ಅಂಗನವಾಡಿ ಕೇಂದ್ರಗಳ ಮಕ್ಕಳ ಪ್ರತಿಭಾ ಪ್ರದರ್ಶನ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕ ಮಕ್ಕಳ ಮನಸ್ಸು ಶುಭ್ರವಾಗಿರುವ ಹಾಳೆ ಇದ್ದಂತೆ. ಅದರ ಮೇಲೆ ಏನನ್ನು ಬರೆದರೂ ಅದು ಅಚ್ಚೊತ್ತಿದ ಹಾಗೆ ಇರುತ್ತದೆ. ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಶಾಲಾ ಪೂರ್ವ ಶಿಕ್ಷಣದ ಅವಧಿಯಲ್ಲಿ ಕಲಿತುಕೊಂಡ ವಿಷಯಗಳು ಸಹಕಾರಿಯಾಗುತ್ತವೆ. ಆದ್ದರಿಂದ, ಭವ್ಯ ಭಾರತದ ಪ್ರಜೆಗಳನ್ನು ರೂಪಿಸುವಲ್ಲಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು-ಸಹಾಯಕಿಯರ ಜವಾಬ್ದಾರಿ ಹೆಚ್ಚಿನದಾಗಿದೆ ಎಂದು ತಿಳಿಸಿದರು.
ಸಿಡಿಪಿಒ ಮಹಾಂತಸ್ವಾಮಿ ಪೂಜಾರ್ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇಂಥ ವೇದಿಕೆಗಳು ಅತ್ಯವಶ್ಯಕ ಎಂದು ಹೇಳಿದರು.
ಮಗುವಿನ ಮನಸ್ಸನ್ನು ಅರಿತು ಬೋಧಿಸುವವರು ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ಇದ್ದಾರೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿ ಕ್ರಮವಹಿಸಲಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎಸ್. ಷಹಜಾನ್ ಮಾತನಾಡಿ, ಶಿಕ್ಷಕರ ಅರ್ಪಣಾ ಮನೋಭಾವದಿಂದ ಮಕ್ಕಳು ನಲಿಯುತ್ತ ಕಲಿಯಲು ಸಾಧ್ಯವಾಗುತ್ತದೆ. ನಲಿಯುತ್ತ ಕಲಿತರೆ ವಿದ್ಯಾರ್ಥಿಗಳಿಗೆ ಕಲಿಕೆ ಹೊರೆಯಾಗುವುದಿಲ್ಲ. ನೈತಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ. ಸಕಾಲದಲ್ಲಿ ನೈತಿಕ ಶಿಕ್ಷಣ ಲಭಿಸದಿದ್ದರೆ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ವಿದ್ಯಾರ್ಥಿಗಳ ಮುಂದಿನ ಹಂತದ ಜೀವನ ದುರ್ಭರವಾಗುತ್ತದೆ. ಆದ್ದರಿಂದ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮೌಲ್ಯಯುತ ಶಿಕ್ಷಣ ನೀಡಬೇಕು. ಅಂಗನವಾಡಿ ಕೇಂದ್ರಗಳು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಹಿರೇಗೋಣಿಗೆರೆ ಗ್ರಾಪಂ ಪಿಡಿಒ ಕೆ. ಅರುಣ್‍ಕುಮಾರ್ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಗ್ರಾಪಂ ವತಿಯಿಂದ ಸಾಧ್ಯವಾದ ಎಲ್ಲಾ ನೆರವು ನೀಡಲಾಗುವುದು ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳ ಮಕ್ಕಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗೋವಿನಕೋವಿ ವಲಯದ 30 ಅಂಗನವಾಡಿ ಕೇಂದ್ರಗಳ 90 ಪುಟಾಣಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ, ಬಹುಮಾನ ಗಳಿಸಿದರು. ವಿಜೇತ ಹಾಗೂ ಪಾಲ್ಗೊಂಡ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು-ಸಹಾಯಕಿಯರಿಗೆ ಹಾಗೂ ಮಕ್ಕಳಿಗೆ ಸ್ಮರಣಿಕೆ, ಬಹುಮಾನಗಳನ್ನು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎಸ್. ಷಹಜಾನ್ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ಎಚ್. ಪ್ರತಿಭಾ, ಹಿರೇಗೋಣಿಗೆರೆ ಗ್ರಾಪಂ ಅಧ್ಯಕ್ಷೆ ಗೀತಮ್ಮ ಬಸವಣ್ಯಪ್ಪ, ವಲಯ ಮೇಲ್ವಿಚಾರಕಿ ರೇಣುಕಾ ಎಂ.ದೇವರೆಡ್ಡಿ, ಕೋಣನತಲೆ ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಎಚ್. ಕವಿತಾ ಇತರರು ಮಾತನಾಡಿದರು.
ಹಿರೇಗೋಣಿಗೆರೆ ಗ್ರಾಪಂ ಉಪಾಧ್ಯಕ್ಷ ಎಂ.ಟಿ. ಮಂಜಪ್ಪ, ಸದಸ್ಯರಾದ ಸೋಮಪ್ಪ, ನಾಗರಾಜ್, ನಾಗರತ್ನಮ್ಮ ಟಿ.ಆರ್. ಪ್ರಶಾಂತ್, ಮಂಜಮ್ಮ ಹುಚ್ಚನಗೌಡ, ಹನುಮಂತಪ್ಪ ಮೂಕದುರ್ಗಪ್ಪ, ನಸ್ರೀನ್ ಬಾನು ತಬರೇಜ್, ಎಸ್ಡಿಎಂಸಿ ಅಧ್ಯಕ್ಷ ಡಿ.ಎನ್. ಮಂಜಪ್ಪ, ಮುಖ್ಯ ಶಿಕ್ಷಕ ಗೇಮ್ಯಾನಾಯ್ಕ, ಬಾಲವಿಕಾಸ ಸಮಿತಿ ಅಧ್ಯಕ್ಷೆ ದೇವಿಕಾ ಧನಿಕರಾಜ್ ಇತರರು ಇದ್ದರು.