ನ್ಯಾಮತಿ ಃ ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ನ್ಯಾಮತಿ ತಾಲೂಕು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ತಾಲೂಕಿನ ದೊಡ್ಡೇತ್ತೀನಹಳ್ಳಿ ಗ್ರಾಮದ ಸೊಸೈಟಿಯಲ್ಲಿ ನೀಡಿರುವ ಕಳಪೆ ಅಕ್ಕಿ ಬಂದಿದೆ ಇದರಲ್ಲಿ ಹುಳ್ಳುಗಳು ಇವೆ ನೋಡಿ ಬೇಕಾದರೆ ಅಲ್ಲಿಗೆ ಹೋಗಿ ಚೀಲದಲ್ಲಿ ನೋಡಿ , ಸೊಸೈಟಿಯಲ್ಲಿ 10 , 20 ರೂಪಾಯಿ ಹಣ ನೀಡಿ ಎಂದು ಕೇಳುತ್ತಾರೆ ಸುನೀಲ ಎಂದಾಗ ಏಕೆ ಹಣ ನೀಡುತ್ತೀರೆ ನೀಡಬೇಡಿ ಇದರ ಬಗ್ಗೆ ದೂರು ನೀಡಿ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಹೇಳಿದರು.
ಸೊಸೈಟಿಯಲ್ಲಿ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಅದನ್ನು ರೈಟಿಂಗ್ನಲ್ಲಿ ನೀಡಿ ಜನರಲಾಗಿ ಹೇಳಬೇಡಿ ಜನರಲಾಗಿ ಬರೆದುಬಿಟ್ಟರೆ ಏನು ಆಗಲ್ಲ ಇಂತಹ ಗ್ರಾಮದ ಇಂತಹ ಸೊಸೈಟಿ ಎಂದು ಸ್ಪಷ್ಟವಾಗಿ ಲಿಖಿತವಾಗಿ ದೂರು ನೀಡಿ ಸಂಘಟನೆಯ ಹೆಸರಿನಲ್ಲಿ ನೀಡಬೇಡಿ ತಮ್ಮ ಹೆಸರು ಮಾಹಿತಿಯನ್ನು ನೀಡಿ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಚಿಗೊಂಡನಹಳ್ಳಿ ಗ್ರಾಮದ ಸಶ್ಮಾನಕ್ಕಾಗಿ ಜಾಗ ನೀಡುವಂತೆ ಗ್ರಾಮದ ಗೀರೀಶ್ ಪಾಟೇಲ್ , ನ್ಯಾಮತಿ ಪಟ್ಟಣದ ಶಿವಾನಂದಪ್ಪ ಬಡಾವಣೆಯಲ್ಲಿ ಹಕ್ಕು ಪತ್ರ ನೀಡಿದರು ನಮಗೆ ಸರಿಯಾಗಿ ಅಧಿಕಾರಿಗಳು ಸ್ಪಂದನೆ ಮಾಡುತ್ತೀಲ್ಲ , ಮಾದನಬಾವಿ ಗ್ರಾಮದಲ್ಲಿ ಮಳೆಗೆ ಬೆಳೆ ಹಾನಿಯಾಗಿದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲವೆಂದು ಮಾದನಬಾವಿ ಗ್ರಾಮದ ರೈತನ ದೂರು.
ನ್ಯಾಮತಿ ಪಟ್ಟಣದ ವಾಸದ ಮನೆಯ ಪಕ್ಕದಲ್ಲಿ ಮಾಂಸ ಆಹಾರದ ಊಟದ ಹೋಟೇಲ್‍ನ್ನು ತೆರೆದಿದ್ದು ಇದರಿಂದ ನಮಗೆ ತೊಂದರೆ ಆಗುತ್ತದೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರು ಗಮನಹರಿಸುತ್ತೀಲ್ಲ ಎಂದು ಮಹಿಳೆ ದೂರು ಹೇಳಿದಾಗ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ.ಕೊಟ್ರೇಶವರಿಗೆ ಈ ತಕ್ಷಣ ಹೋಟೆಲ್ ಸೀಚ್ ಮಾಡುವಂತೆ ಸೂಚನೆ ನೀಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ನಿಗದಿತ ಸಮಯಕ್ಕೆ ಪರಿಹಾರ ನೀಡಬೇಕು. ಅದನ್ನು ಬಿಟ್ಟು ವಿನಾಕಾರಣ ಕಚೇರಿಗೆ ಅಲೆದಾಡುವುದು ಸರಿಯಲ್ಲ. ಯಾವುದೇ ಅಧಿಕಾರಿ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಲಾಗುತ್ತದೆ , ಸಾರ್ವಜನಿಕ ಕೆಲಸಗಳನ್ನು ತುರ್ತಾಗಿ ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ರಾಜ್ಯ ಸರಕಾರದ ನಿರ್ದೇಶನದಂತೆ ಪ್ರತಿ ತಿಂಗಳು ಒಂದು ತಾಲೂಕಿನಲ್ಲಿ ಸ್ಥಳದಲ್ಲೇ ಪರಿಹಾರ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಂದರ್ಭದಲ್ಲಿ ಹೊನ್ನಾಳಿ ಉಪವಿಭಾಗಧಿಕಾರಿ ತಿಮ್ಮಣ್ಣ ಹುಲ್ಲುಮನೆ , ತಹಶೀಲ್ದಾರ್ ಎಂ.ರೇಣುಕಾ , ಬಿಸಿಎಂ ಇಲಾಖೆಯ ಮೃತ್ಯುಂಜಯಯ್ಯ , ಬೆಸ್ಕಾಂನ ಬಿ.ಕೆ.ಶ್ರೀನಿವಾಸ್ , ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ.ಕೊಟ್ರೇಶ್ , ಪಿಎಸ್‍ಐ ಪಿ.ಎಸ್.ರಮೇಶ್ , ಶಿರಸ್ತೆದಾರ್ ಕೆಂಚಮ್ಮ , ಶಿಕ್ಷಣ ಇಲಾಖೆಯ ಮುದ್ದನಗೌಡ , ಅರಣ್ಯ ಇಲಾಖೆಯ ಚೇತನ್ , ಕಂದಾಯ ಇಲಾಖೆಯ ಸುದೀರ್ , ಗಣೇಶ್‍ಗೌಡ ಸೇರಿದಂತೆ ಇತರರು ಇದ್ದರು.