ಹುಣಸಘಟ್ಟ : ಸುಮಾರು ಎರಡುವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ವಿಶ್ವದ ಅತ್ಯಂತ ಪ್ರಾಚೀನತ ಭಾಷೆಗಳಲ್ಲಿ ಕನ್ನಡ ಸಹ ಪ್ರಮುಖವಾಗಿದೆ ಎಂದು ಹೊಟ್ಯಾಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದರು.
ಸಾಸ್ವೇಹಳ್ಳಿ ಹೋಬಳಿ ವ್ಯಾಪ್ತಿಯ ಕುಳಗಟ್ಟೆ ಗ್ರಾಮದಲ್ಲಿ ಕಲ್ಪತರು ಕನ್ನಡ ಯುವಕರ ಸಂಘವು ಆಯೋಜಿಸಿದ 19ನೇ ವರ್ಷದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಉದ್ಘಾಟನೆಯ ದೀಪ ಬೆಳಗಿಸಿ ಮಾತನಾಡಿದ ಅವರು ಇಂದಿನ ಪೋಷಕರು ಹಾಗೂ ಮಕ್ಕಳಿಗೆ ನಾಡಿನ ಭಾಷೆ ಸಂಸ್ಕೃತಿಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಶಾಲೆಯಲ್ಲಿ ಬಿಡಿ, ಮನೆಯಲ್ಲೂ ಕನ್ನಡ ಮಾತನಾಡದಂತೆ ಪೋಷಕರು ಮಕ್ಕಳಿಗೆ ತಾಕಿತು ಮಾಡುತ್ತಾರೆ ಎಂಬುದು ನಿಜಕ್ಕೂ ವಿಪರ್ಯಾಸ!? ಭವಿಷ್ಯಕ್ಕಾಗಿ ಇಂಗ್ಲಿಷ್ ಬಳಕೆ ಅಥವಾ ಕಲಿಕೆ ಅನಿವಾರ್ಯವಾದರೂ ಕನ್ನಡ ನಮ್ಮನ್ನು ಎಂದಿಗೂ ಹೆತ್ತ ತಾಯಿಯಾಗಿ ಉಳಿಯಲಿ. ಇತರ ಭಾಷೆಗಳು ನಮ್ಮ ಸಂಬಂಧಿಕರಂತೆ ಭಾವಿಸೋಣ? ಅಂತೆಯೇ ಯಾವುದೇ ಕನ್ನಡಪರ ಸಂಘಟನೆಗಳು ಸಹ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಮೀಸಲಾಗಿರಸದೇ ಕನ್ನಡ ನೆಲ ಜಲದ ಜೊತೆಗೆ ಗ್ರಾಮದ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದರು.
ದಾವಣಗೆರೆ ಉಪನ್ಯಾಸಕ ಡಾಕ್ಟರ್ ಓಬಳೇಶ್ ಮಾತನಾಡಿ ಕನ್ನಡ ಯಾವತ್ತೂ ನಶಿಸಿಹೋಗುವ ಭಾಷೆಯಲ್ಲ. ಶ್ರೀಮಂತ ಭಾಷೆ ಎನ್ನುವುದಕ್ಕೆ ತಾಯಿ ಕನ್ನಡ ಭಾಷೆಗೆ ಲಭಿಸಿದ ಎಂಟು ಜ್ಞಾನಪೀಠ ಪ್ರಶಸ್ತಿಗಳೇ ಸಾಕ್ಷಿ. ಸರ್ಕಾರ ಹಾಗೂ ಸಾರ್ವಜನಿಕರು ಕನ್ನಡವನ್ನು ಬಳಸುವುದರ ಜೊತೆಯಲ್ಲಿ ಉಳಿಸುವ ಕೆಲಸವನ್ನು ಮಾಡಬೇಕು ಎಂದರು.
ಮಾಜಿ ಶಾಸಕ ಡಿಜಿ ಶಾಂತನಗೌಡ್ರು ಮಾತನಾಡಿ ಕಾನ್ವೆಂಟ್ ಶಾಲೆಗೆ ಹೋದರೆ ನಮ್ಮ ಮಕ್ಕಳು ಬುದ್ಧಿವಂತರಾಗುತ್ತಾರೆ ಎನ್ನುವುದು ನಮ್ಮ ಭ್ರಮೆ. ಕನ್ನಡ ಶಾಲೆಯಲ್ಲಿ ಓದಿ ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಬರೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ಈ ನಾಡಿಗೆ ಕೀರ್ತಿತಂದ ಅನೇಕ ಮಹನೀಯರು ನಮ್ಮ ಕಣ್ಣೆದುರಿನಲ್ಲೇ ಇದ್ದಾರೆ. ಎಂದರು
ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡಿನ ಹೋರಾಟಗಾರರ ಪೋಷಾಕು ಧರಿಸಿ ಹಂದಿನ ಹೋರಾಟದ ದಿನಗಳ ನೆನಪು ಸ್ಮರಣೆ ಮಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ ಮಾಜಿ ಅಧ್ಯಕ್ಷತೆ ಹಾಗೂ ಗ್ರಾ ಪಂ ಅಧ್ಯಕ್ಷ ರತ್ನಮ್ಮ ರಾಜಪ್ಪ ವಹಿಸಿ ಮಾತನಾಡಿದ ಸಭೆಯಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ರಂಗನಾಥ್, ಬಗರು ಕುಂ ಸಮಿತಿ ನಿರ್ದೇಶಕ ಮಹಾಂತೇಶ್,ಗ್ರಾಪಂ ಉಪಾಧ್ಯಕ್ಷ ಗೀತಮ್ಮ ಸದಸ್ಯರಾದ ಹಾಲೇಶಪ್ಪ, ಹನುಮಂತಪ್ಪ, ಚಂದ್ರಪ್ಪ, ಬಸವರಾಜಯ್ಯ, ರುದ್ರನಗೌಡ, ಚಂದ್ರಮ್ಮ ಶಾಂತಮ್ಮ ಲಲಿತಮ್ಮ ಕಲ್ಪತರು ಕನ್ನಡ ಯುವಕ ಸಂಘದ ಪದಾಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.