ಜಾನುವಾರುಗಳಲ್ಲಿ ಚರ್ಮಗಂಟು ವ್ಯಾಪಕವಾಗಿ ಹರಡುತ್ತಿರುವ ಕಾರಣ ಈ ರೋಗ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಡಿಸೆಂಬರ್ 12ರವರೆಗೆ ಜಾನುವಾರು ಸಂತೆ, ಜಾತ್ರೆ ಹಾಗೂ ಜಾನುವಾರು ಸಾಗಾಣಿಕೆ  ನಿಷೇಧಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ.
  ಜಿಲ್ಲೆಯ ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ, ನ್ಯಾಮತಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗವು ಕಾಣಿಸಿಕೊಂಡಿದ್ದು ರೋಗ ವ್ಯಾಪಾಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಜಾನುವಾರುಗಳಿಗೆ ರೋಗದ ಪರೀಕ್ಷೆಯನ್ನು ಐ.ಸಿ.ಎ.ಆರ್-ನಿವಿಧಿ ಬೆಂಗಳೂರು ಅವರಿಂದ ಮಾಡಲಾಗಿದ್ದು ಇನ್ನುಳಿದ ಜಾನುವಾರುಗಳಿಗೆ ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಐಹೆಚ್‍ಎ&ವಿಬಿ ರವರ ರೆಪರಲ್ ಪ್ರಯೋಗಾಲಯದಲ್ಲಿ ಮಾಡಲು ಸೂಕ್ಷ್ಮ ವ್ಯವಸ್ಥೆ ಇರುತ್ತದೆ.
   ದಿ:17.11.2022ರವರೆಗೆ ಒಟ್ಟು 436 ಗ್ರಾಮಗಳಲ್ಲಿ 18,388 ಜಾನುವಾರುಗಳಿಗೆ ಈ ರೋಗವು ಕಂಡುಬರುತ್ತದೆ.ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ರೋಗ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣವಾಗಿರುವುದರಿಂದ ಈ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 12 ರವರೆಗೆ  ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *