ನ್ಯಾಮತಿ: ಫಲವನಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಾತೆಂಗ್ಯಮ್ಮ ದೇವಿಯ ನೂತನ ದೇವಸ್ಥಾನದ ಲೋಕಾರ್ಪಣೆ ಹಾಗೂ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ಕುಂಭಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನೂತನ ದೇವಸ್ಥಾನದ ಉದ್ಘಾಟನೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ನೆರವೇರಿಸಿದರು. ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಶ್ರೀ ಮಾತಂಗಮ್ಮ ದೇವಿ ದೇವಸ್ಥಾನವನ್ನು ಊರಿನ ಮುಖಂಡರು ಮತ್ತು ಗ್ರಾಮಸ್ಥರು ಸೇರಿ ದೇವಸ್ಥಾನ ಕಟ್ಟಿರುವುದು ಬಹಳ ಸಂತೋಷದ ವಿಷಯ ದೇವಿಯ ಆಶೀರ್ವಾದ ಸದಾ ತಮ್ಮ ಮೇಲೆ ಇರಲಿ ಎಂದುರು.
ಮಾಜಿ ಶಾಸಕ ಡಿ ಜಿ ಶಾಂತನಗೌಡರು ಶ್ರೀ ಮಾತಿಂಗಮ್ಮ ದೇವಿ ದರ್ಶನ ಪಡೆದರು. ಊರಿನ ಗ್ರಾಮಸ್ಥರು ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಮಂಜಪ್ಪ, ಹಿರಿಯಪ್ಪ ಮಾಸ್ಟರ್, ಶಿವ ರಾಮಪ್ಪ ,ಕಾಳೇಶಪ್ಪ ರಂಗಪ್ಪ ಮೂಲೆಮನೆ, ಸತ್ಯನಾರಾಯಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಮತ್ತು ಊರಿನ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.