ಹುಣಸಘಟ್ಟ: ಇದುವರೆಗೂ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿಭಾ ಕಾರಂಜಿ, ಕ್ರೀಡಾ ಚಟುವಟಿಕೆ, ಪಠ್ಯೇತರ ಕಾರ್ಯಕ್ರಮಗಳನ್ನು ಮಕ್ಕಳಿಗೆ ಆಯೋಜಿಸುತ್ತಿದ್ದು, ಸರ್ಕಾರ ಈ ವರ್ಷ ಮೊಟ್ಟಮೊದಲ ಬಾರಿಗೆ ಅಡಿಗೆ ಸಿಬ್ಬಂದಿಯವರಿಗೆ ಅಡಿಗೆ ತಯಾರಿಕಾ ಸ್ಪರ್ಧೆ ಏರ್ಪಡಿಸಿ ಅವರಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಕ್ಷರ ದಾಸೋಹ ನಿರ್ದೇಶಕ ಕೆ ಆರ್ ರುದ್ರಪ್ಪನವರು ಹೇಳಿದರು.
ಹೋಬಳಿ ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ( ಪ್ರಾಥಮಿಕ ಶಾಲಾ ವಿಭಾಗ ) ಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಕ್ಷರ ದಾಸೋಹ ಕಾರ್ಯಕ್ರಮದಡಿ ಅಡುಗೆ ತಯಾರಿಕ ಸ್ಪರ್ದಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಡಿಗೆಯವರಿಗೆ ಬಹುಮಾನ ಅಭಿನಂದನಾ ಪತ್ರ ವಿತರಿಸಿ ಮಾತನಾಡಿ ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅಡಿಗೆಯವರು ಮಕ್ಕಳಿಗೆ ಚೆನ್ನಾಗಿ ಬಿಸಿಯೂಟ ನಿರ್ವಹಣೆ ಮಾಡುತ್ತಿದ್ದಾರೆ ಇನ್ನೊಂದು ವಾರ 15 ದಿನಗಳಲ್ಲಿ ಅಡಿಗೆಯವರಿಗೆ ತರಬೇತಿ ಕಾರ್ಯವನ್ನು ಹೋಬಳಿ ಸಾಸ್ವೆಹಳ್ಳಿ ಲಿಂಗಾಪುರ ಬೆನಕನಹಳ್ಳಿ 3 ಕ್ಲಸ್ಟರ್ ಸೇರಿ ಒಂದೇ ಕಡೆ ತರಬೇತಿ ಕರೆದು ಆ ಸಂದರ್ಭದಲ್ಲಿ ಅಡಿಗೆ ಮಾಡುವ ಉದ್ಯೋಗಕ್ಕೆ ಏನು ಮಾರ್ಗದರ್ಶನ ನೀಡಬೇಕು ಆ ಸಂದರ್ಭದಲ್ಲಿ ಅಡಿಗೆಯವರಿಗೆ ಪೂರಕ ಮಾಹಿತಿ ಹಾಗೂ ಉತ್ಸಾಹ ತುಂಬ ಕೆಲಸವನ್ನು ಮಾಡಲಾಗುವುದು ಎಂದರು.
ಸಾಸ್ವೆಹಳ್ಳಿ ಕ್ಲಸ್ಟರ್ ನ ಸಿ ಆರ್ ಪಿ ಕಾಳಾಚಾರ್ ಪ್ರಾಸ್ತವಿಕವಾಗಿ ಮಾತನಾಡಿ ಕ್ಲಸ್ಟರ್ ನ 15 ಶಾಲಾ ಎಲ್ಲಾ ಅಡಿಗೆ ಸಿಬ್ಬಂದಿಯವರು ಅಡಿಗೆ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲಾ ಆಹಾರ ಸೂಚಿತ ಪಟ್ಟಿಯಲ್ಲಿರುವ ಆಹಾರ ಪದಾರ್ಥಗಳನ್ನು ತಯಾರಿಸಿದ್ದಾರೆ. ಅದರ ಜೊತೆಗೆ ರಂಗೋಲಿ ಸ್ಪರ್ಧೆ ಗೀತ ಗಾಯನ ಮ್ಯೂಸಿಕಲ್ ಚೇರ್ ಸ್ಪರ್ಧೆಗಳಲ್ಲೂ ಭಾಗವಹಿಸಿ ಕೆಲವು ಮಹಿಳೆಯರು ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ತೀರ್ಪುಗಾರರಾಗಿ ಗ್ರಾ ಪಂ ಅಧ್ಯಕ್ಷರು, ಎಸ್ ಡಿ ಎಂ ಸಿ, ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಮಹಿಳಾ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಿ ಜಡ್ಜ್ ಮಾಡಿ ಅಂತಿಮ ತೀರ್ಪು ನೀಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಅಡಿಗೆ ಸಿಬ್ಬಂದಿಯವರಿಗೂ ಅಭಿನಂದನಾ ಪತ್ರ ನೆನಪಿನ ಕಾಣಿಕೆ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕ ಜಿವುಲಾ ನಾಯ್ಕ ವಹಿಸಿದ್ದರು. ಇ ಸಿ ಓ ರಾಜಶೇಖರಯ್ಯ, ತಾಲೂಕು ಎಸ್ ಡಿ ಎಂ ಸಿ ಅಧ್ಯಕ್ಷ ಶಿವಲಿಂಗಪ್ಪ, ಸಿ ಆರ್ ಪಿ ಕುಮಾರ್, ಗ್ರಾಂಪಂ ಅಧ್ಯಕ್ಷ ಸವಿತಾ ನಾಡಿಗ್, ಮುಖ್ಯ ಶಿಕ್ಷಕ ರಂಗನಾಥ್ ಶೈಲಜಾ ಕುಮಾರಿ,ಕ್ಲಸ್ಟರ್ ನ ಎಲ್ಲಾ ಅಡಿಗೆ ತಯಾರಕರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.