ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಆಕ್ಷನ್ ಇನ್ಷಿಯೇಟಿವ್ ಫಾರ್ ಡೆವಲಪ್ಮೆಂಟ್ ಸಹಯೋಗದಲ್ಲಿ ಸುಸ್ಥಿರ ಅಭಿವೃದ್ದಿ ಗುರಿಗಳ ತರಬೇತಿ ಕಾರ್ಯಾಗಾರ ಡಿಸೆಂಬರ್ 09 ರಂದು ಬೆಳಿಗ್ಗೆ 11 ಗಂಟೆಗೆ ಎಸ್.ಪಿ ಆಪೀಸ್ ಮುಂಭಾದಲ್ಲಿರುವ ಅಡೋರಸ್ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಹಿರಿಯ ನ್ಯಾಯಾವಾದಿಗಳಾದ ಎಲ್.ಹೆಚ್ ಅರುಣಕುಮಾರ್ ಉದ್ಘಾಟನೆ ನೆರವೇರಿಸಲಿದ್ದು, ಎ.ಐ.ಡಿ ಸಂಸ್ಥೆಯ ಕಾರ್ಯದರ್ಶಿ ಬಾಬಣ್ಣ.ಡಿ.ಎಸ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಸೌತ್ ಇಂಡಿಯಾ ವಾಲೆಂಟಿಯರ್ಸ್ ಅಲಯನ್ಸ್ನ ರಾಜಕುಮಾರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರಾದ ರಜಿನಕುಮಾರಿ.ಜಿ.ಎಸ್ ಪಾಲ್ಗೊಳ್ಳುವರೆಂರು ಪ್ರಕಟಣೆ ತಿಳಿಸಿದೆ.