ಹೊನ್ನಾಳಿ:
ಮಾಜಿ ಶಾಸಕ, ಹಿರಿಯ ರಾಜಕಾರಣಿ ಡಿ.ಜಿ. ಶಾಂತನಗೌಡ ಅವರು ಗುರುವಾರ ತಮ್ಮ 74ನೇ ಹುಟ್ಟು ಹಬ್ಬವನ್ನು ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು.
ತಮ್ಮ ಹುಟ್ಟುಹಬ್ದದ ದಿನವಾದ ಗುರುವಾರ ತಮ್ಮ ಹುಟ್ಟೂರಾದ ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ಕುಟುಂಬದೊಂದಿಗೆ ತೆರಳಿ ಅಲ್ಲಿನ ಗ್ರಾಮದೇವರವಾದ ಶ್ರೀ ಬೆನಕೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗೊಲ್ಲರಹಳ್ಳಿ ಗ್ರಾಮದ ತಮ್ಮ ನಿವಾಸಕ್ಕೆ ಆಗಮಿಸಿ ತಮ್ಮ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಬಂಧುಗಳೊಂದಿಗೆ ಕೇಕ್ ಕತ್ತರಿಸಿ, ಸಂಭ್ರಮಿಸಿದರು.
ಗೊಲ್ಲರಹಳ್ಳಿಯ ತಮ್ಮ ನಿವಾಸದಿಂದ ತೆರೆದ ಜೀಪಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಟಿಬಿ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಗೆ ಬೃಹತ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.


ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಿ.ಜಿ. ಬಸವರಾಜಪ್ಪ, ಮುಖಂಡರಾದ ಎಚ್.ಬಿ. ಶಿವಯೋಗಿ, ಕೆಪಿಸಿಸಿ ಸದಸ್ಯ ಡಾ.ಎಲ್. ಈಶ್ವರನಾಯ್ಕ, ಡಿ.ಎಸ್. ಸುರೇಂದ್ರಗೌಡ, ಡಿ.ಎಸ್. ಪ್ರದೀಪ್‍ಗೌಡ, ಯಕ್ಕನಹಳ್ಳಿ ವೈ.ಕೆ. ದಯಾನಂದ್, ದಿಡಗೂರು ಎ.ಜಿ. ಪ್ರಕಾಶ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್. ರಂಜಿತ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಗೊಲ್ಲರಹಳ್ಳಿ ಕಿರಣ್ ಇತರರು ಇದ್ದರು.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಗೊಲ್ಲರಹಳ್ಳಿಯ ತಮ್ಮ ನಿವಾಸದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿದರು.

Leave a Reply

Your email address will not be published. Required fields are marked *