ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ರಥೋತ್ಸವದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೆಳೆಯುತ್ತಿರುವ ಜನಸಂಖ್ಯೆ ನಮ್ಮ ದೇಶದ ಎಲ್ಲಾ ಅಭಿವೃದ್ಧಿಯನ್ನು ನುಂಗಿ ಹಾಕುತ್ತಿದೆ. ಆದ್ದರಿಂದ, ನಾವೆಲ್ಲರೂ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕಿದೆ. ಹಾಗಾಗಿ, ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾದವರು ಚಿಕ್ಕ ಸಂಸಾರಕ್ಕೆ ಮೊದಲ ಆದ್ಯತೆ ನೀಡಬೇಕು. “ಹೆಣ್ಣಾಗಲಿ, ಗಂಡಾಗಲಿ, ನಮಗೆ ಒಂದೇ ಮಗು ಸಾಕು” ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು. ಒಂದೊಮ್ಮೆ ಕೂಲಂಬಿ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 396 ಜೋಡಿ ದಾಂಪತ್ಯಕ್ಕೆ ಅಡಿ ಇಟ್ಟದ್ದು ಇಂದಿಗೂ ಒಂದು ದಾಖಲೆಯಾಗಿ ಉಳಿದಿದೆ. ಆದರೆ, ಬರುಬರುತ್ತ ಎಲ್ಲೆಡೆ ಸಾಮೂಹಿಕ ವಿವಾಹ ಸಮಾರಂಭಗಳನ್ನು ಏರ್ಪಡಿಸುತ್ತಿರುವ ಕಾರಣ ಇಳಿಮುಖವಾಗಿದೆ ಎಂದು ಹೇಳಿದರು.
ಕೂಲಂಬಿಯ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿಯ ಸುಕ್ಷೇತ್ರದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸತಿ-ಪತಿಗಳಾಗುವುದು ಪೂರ್ವಜನ್ಮದ ಪುಣ್ಯದ ಫಲವಾಗಿದೆ. ಆದ್ದರಿಂದ, ಇಲ್ಲಿ ಸಂಗಾತಿಗಳಾಗಿರುವವರು ಆದರ್ಶ ಜೀವನ ನಡೆಸಬೇಕು ಎಂದು ತಿಳಿಸಿದರು.
ತವರುಮನೆಯಿಂದ ಗಂಡನ ಮನೆಗೆ ಬರುವ ಹೆಣ್ಣು ಎಲ್ಲರ ಪ್ರೀತಿ ಗಳಿಸಬೇಕು. ಅತ್ತೆ-ಮಾವಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಗಂಡನ ಮನೆಯವರು ಕೂಡ ಸೊಸೆಯನ್ನು ತಮ್ಮ ಮಗಳಂತೆ ನೋಡಿಕೊಳ್ಳಬೇಕು. ಆಗ ಸಂಸಾರ ನಂದನವನದಂತಾಗುತ್ತದೆ ಎಂದು ವಿವರಿಸಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, “ಸತಿ-ಪತಿಗಳು ಒಂದಾದ ಭಕ್ತಿ ಹಿತವಪ್ಪುದು ಶಿವನಿಗೆ” ಎಂಬ ಮಾತಿನಂತೆ ಗಂಡ-ಹೆಂಡತಿಯರು ದೇವರನ್ನು ಒಂದೇ ಮನಸ್ಸಿನಿಂದ ಆರಾಧಿಸಬೇಕು. ಅಂಥ ಭಕ್ತಿ ಶಿವನಿಗೆ ಪ್ರಿಯವಾಗುತ್ತದೆ. ಸಂಸಾರ ಬಂಧನದ ನಡುವೆಯೂ ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿಂದೂ ಧರ್ಮದಲ್ಲಿ ವಿವಾಹಕ್ಕೆ ತನ್ನದೇ ಆದ ಮಹತ್ವವಿದೆ. ಇದನ್ನು ಅರಿತುಕೊಂಡು ನವ ವಿವಾಹಿತರು ಸುಂದರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವವರು ಪರಸ್ಪರ ಅರ್ಥ ಮಾಡಿಕೊಂಡು ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಶ್ರೀ ಗದ್ದಿಗೇಶ್ವರ, ಬಸವಣ್ಣ, ರಾಮೇಶ್ವರ ಕಮಿಟಿ ಅಧ್ಯಕ್ಷ ಟಿ.ಎಸ್. ಸೋಮಶೇಖರ್ ಮಾತನಾಡಿ, ಕಳೆದ ಐದಾರು ದಶಕಗಳಿಂದ ಕೂಲಂಬಿ ಗ್ರಾಮದಲ್ಲಿ ಸಮಿತಿಯ ವತಿಯಿಂದ ಸಾಮೂಹಿಕ ವಿವಾಹ ಸಮಾರಂಭ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮಸ್ಥರು, ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಭಕ್ತರು, ಎಲ್ಲಾ ಹಂತಗಳ ಜನಪ್ರತಿನಿಧಿಗಳು ಹೃತ್ಪೂರ್ವಕ ಸಹಕಾರ ನೀಡುತ್ತಿದ್ದಾರೆ. ಸಮಿತಿಯ ಎಲ್ಲರೂ ಉತ್ತಮವಾಗಿ ಸಹಕಾರ ನೀಡುತ್ತಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಿಡಿಪಿಒ ಮಹಾಂತಸ್ವಾಮಿ ಪೂಜಾರ್, ವಕೀಲರಾದ ಬಿ.ಎಸ್. ಲಿಂಗರಾಜ್, ಸಿ.ಜಿ. ಜಗದೀಶ್ ಇತರರು ಮಾತನಾಡಿದರು.
ಶ್ರೀ ಗದ್ದಿಗೇಶ್ವರ, ಬಸವಣ್ಣ, ರಾಮೇಶ್ವರ ಕಮಿಟಿ ಉಪಾಧ್ಯಕ್ಷ ಜಿ.ಟಿ. ಮುರಿಗೆಪ್ಪ, ಕಾರ್ಯದರ್ಶಿ ವೈ.ಎಂ. ಬಸವಲಿಂಗಪ್ಪ, ಸಹ ಕಾರ್ಯದರ್ಶಿ ಜಿ. ಹೇಮಂತರಾಜ್, ಖಜಾಂಚಿ ಕೆ.ಬಿ. ಬಸವರಾಜಪ್ಪ, ಸಹ ಖಜಾಂಚಿ ಕೆ.ಎಂ. ಬಸವಲಿಂಗಪ್ಪ, ನಿರ್ದೇಶಕರಾದ ಸಿ. ಮಹಾದೇವಪ್ಪ, ಜಿ. ಶಂಕರಮೂರ್ತಿ, ಕೆ.ಜಿ. ಶಿವನಗೌಡ, ಎಂ.ಪಿ. ಯೋಗೇಂದ್ರಪ್ಪ, ಬಿ.ಎಸ್. ಅಜ್ಜಯ್ಯ, ಬಿ.ಎಸ್. ಲಿಂಗರಾಜ್, ಎಚ್.ಎಸ್. ಬಸವಲಿಂಗಪ್ಪ, ಕೆ.ಎಸ್. ಹಾಲಪ್ಪ, ಬಸವಲಿಂಗಪ್ಪ ಪೂಜಾರ್, ಆರ್. ಮಲ್ಲಿಕಾರ್ಜುನ್, ಕೆ.ಎಂ. ನಾಗರಾಜಪ್ಪ, ಜಿ.ಎ. ನಾಗರಾಜ್, ಎಂ.ಎನ್. ರೇವಣಸಿದ್ಧಪ್ಪ, ಎಸ್. ಕರಿಬಸಪ್ಪ, ಕೆ.ಎಂ. ರೇವಣಸಿದ್ಧಪ್ಪ, ಎ.ಕೆ. ಮುರಿಗೇಂದ್ರಪ್ಪ, ಸುಮಾ ರೇಣುಕಾಚಾರ್ಯ, ಉಪ ತಹಸೀಲ್ದಾರ್ ಮಂಜುನಾಥ್ ಕೆ.ಇಂಗಳಗುಂದಿ, ರಾಜಸ್ವ ನಿರೀಕ್ಷಕ ಬಿ.ಎಂ. ರಮೇಶ್, ಕೂಲಂಬಿ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷ ಟಿ.ಎಸ್. ಬಸವರಾಜ್, ಸದಸ್ಯರಾದ ರೇವಣಸಿದ್ಧಪ್ಪ, ಕೆ.ಬಿ. ಸಿದ್ಧನಗೌಡ ಇತರರು ಇದ್ದರು.
ಸಾಮೂಹಿಕ ವಿವಾಹ ಸಮಾರಂಭದಲ್ಲಿ 35 ಜೋಡಿ ದಾಂಪತ್ಯಕ್ಕೆ ಅಡಿ ಇಟ್ಟರು. ಇತ್ತೀಚೆಗೆ ನಿಧನರಾದ ಎಂ.ಆರ್. ಚಂದ್ರಶೇಖರ್ ಸ್ಮರಣಾರ್ಥ ಎಂ.ಪಿ. ರೇಣುಕಾಚಾರ್ಯ-ಸುಮಾ ರೇಣುಕಾಚಾರ್ಯ ವಧು-ವರರಿಗೆ ಬಟ್ಟೆಗಳನ್ನು ಉಚಿತವಾಗಿ ವಿತರಿಸಿದರು. ಕೂಲಂಬಿ ಗ್ರಾಮದ ಟಿ.ಎನ್. ಮಂಜುನಾಥ್, ಸುರೇಶ್, ರಘು ಅರಿಷಿಣ-ಕುಂಕುಮ, ಬೆಳ್ಳಿ ಕಾಲುಂಗುರಗಳನ್ನು ವಿತರಿಸಿದರು.