ನ್ಯಾಮತಿ : ಪಟ್ಟಣದಲ್ಲಿರುವ ಕಿತ್ತೂರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಗುರುವಾರ ರಾತ್ರಿ ಸುಮಾರು 8-30ಕ್ಕೆಸರಿಯಾಗಿ ಹೊನ್ನಾಳಿ ತಾಲೂಕಿನ ಮಾಜಿ ಶಾಸಕ ಡಿ ಜಿ ಶಾಂತನ ಗೌಡ್ರು ರವರ 74ನೇ ಹುಟ್ಟುಹಬ್ಬವನ್ನು ಅಭಿಮಾನಿ ಬಳಗ ಮತ್ತು ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರು ಹುಟ್ಟುಹಬ್ಬವನ್ನು ಆಚರಿಸಿಕೊಂಡು ನಂತರ ಮಾತನಾಡಿ ನನ್ನ ಹುಟ್ಟುಹಬ್ಬವನ್ನು ಆಚರಿಸುವುದು ಬೇಡ ಎಂದು ಎಷ್ಟೇ ಹೇಳಿದರು ನ್ಯಾಮತಿ ಪಟ್ಟಣ ಮತ್ತು ತಾಲೂಕಿನ ಸುತ್ತಮುತ್ತನ ಹಳ್ಳಿಗಳ ನನ್ನ ಅಭಿಮಾನಿಗಳು ಸ್ವತಹ ಅವರೇ ಹಣವನ್ನು ಹಾಕಿಕೊಂಡು ನನ್ನ ಜನ್ಮದಿನ ಆಚರಿಸಿದ್ದಾರೆ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು. ನನ್ನ ಯಾವ ಪೂರ್ವ ಜನ್ಮದ ಪುಣ್ಯವೋ ಗೊತ್ತಿಲ್ಲ ನಿಮಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ,ನನ್ನ ಕೊನೆ ಉಸಿರು ಇರುವವರೆಗೆ ನಿಮ್ಮ ಸೇವೆಯನ್ನು ಸಲ್ಲಿಸುತ್ತೇನೆ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ನಾಮತಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನುಚ್ಚಿನು ವಾಗೀಶ್ ಟೌನ್ ಘಟಕದ ಅಧ್ಯಕ್ಷ ಜಿ ಲೋಕೇಶಪ್ಪ ಟೌನ್ ಪ್ರದಾನ ಕಾರ್ಯದರ್ಶಿ ಎಂ ಕರಿಬಸಪ್ಪ ನ್ಯಾಮತಿ ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೊಡಿಕೊಪ್ಪದ ಶಿವಣ್ಣ, ನಾಗರಾಜಪ್ಪ ರೆಡ್ಡಿ, ಬುಡ್ಡಪ್ಪ ,ಕೆ ಗಂಗಾಧರಪ್ಪ, ಷಣ್ಮುಖಪ್ಪ, ಎಚ್ ಕೆ ಕರಿಬಸಪ್ಪ, ಕಾಂತರಾಜ್, ನ್ಯಾಮತಿ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮದ ಅಭಿಮಾನಿ ಬಳಗದವರು ಸಹ ಭಾಗಿಯಾಗಿದ್ದರು.