ನ್ಯಾಮತಿ: ಡಿ 12 ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಬಿದರಹಳ್ಳಿ ಗ್ರಾಮದಲ್ಲಿಂದು ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಸಿದ್ದೇಶ್ವರ ಯುವಕ ಸೇವಾ ಸಮಿತಿ ಬಿದರಳ್ಳಿ ಮತ್ತು ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರ ಹಾಗೂ ಮೋದಿಕೇರ್ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 35 ರಕ್ತದಾನಿಗಳು ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ವೈದ್ಯರು ನೀಡಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ವೈದ್ಯರಾದ ಡಾ. ದಿನಕರ ಗ್ರಾಮಸ್ಥರಾದ ಚಂದ್ರಪ್ಪ, ಸಿದ್ದೇಶ್ವರ ಬಿಕೆ ,ಶ್ರೀ ಸಿದ್ದೇಶ್ವರ ಯುವಕರ ಮಂಡಳಿಯ ಯುವಕರು ಮತ್ತು ದಾದಿಯರು ಆಶಾ ಕಾರ್ಯಕರ್ತೆಯರು ಹಾಗೂ ಊರಿನ ಗ್ರಾಮಸ್ಥರು ಸಹ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *