ಹೊನ್ನಾಳಿ,13: ಪಟ್ಟಣದ ದೇವನಾಯ್ಕನಹಳ್ಳಿ ಕನಕ ವೃತ್ತದಲ್ಲಿ ಮಾರ್ಚ್ ಮೊದಲವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶ್ರೀ ಭಕ್ತ ಕನಕದಾಸರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗುವುದು ಎಂದು ಕುರಬ ಸಮಾಜದ ಹಿರಿಯ ಮುಖಂಡ ಬಿ.ಸಿದ್ದಪ್ಪ ಹೇಳಿದರು.
ಪ್ರವಾಸಿ ಮಂದಿರದಲ್ಲಿ ತಾಲೂಕು ಕುರಬ ಸಮಾಜದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು sಸಮಾಜದ ಮುಖಂಡರಾದ ಹೆಚ್.ಬಿ.ಮಂಜಪ್ಪ ಅವರು 2008 ರಿಂದ ಇಲ್ಲಿಯ ವರೆಗೂ ತಾಲೂಕು ಕುರಬ ಸಮಾಜ ಹಲವು ವರ್ಷಗಳಿಂದ ಸಮಾಜದ ಕೆಲಸಗಳನನು ಮಾಡದೆ ನಿಷ್ಕøಯವಾಗಿದೆ ಎಂದು ಹೇಳುತ್ತಿದ್ದಾರೆ ಅವರು ತಾಲೂಕಿನಲ್ಲಿ ಇದ್ದಾರೆ ಇಲ್ಲವೋ ಎಂಬ ಅನುಮಾನ ಮೂಡುತ್ತದೆ ಈ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದರು.
2008ರ ನಂತರ 2012ರಲ್ಲಿ ಕನಕ ಜಯಂತಿ ದಾವಣಗೆರೆಯಲ್ಲಿ ನಡೆದ ಕನಕ ಜಯಂತಿ ಹೊನ್ನಾಳಿಯಿಂದ ಸಾವಿರಾರು ಜನರು ಭಾಗವಹಿಸಿದ್ದು ರಾಜ್ಯಮಟ್ಟದ ಎಸ್ಟಿ ಹೋರಾಟದ ಹಿನ್ನಲೆಯಲ್ಲಿ ಶಿಕಾರಿಪುರದಲ್ಲಿ ನಡೆದು ರಾಜ್ಯ ವಿಭಾಗ ಮಟ್ಟದ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಹೊನ್ನಾಳಿಯವರೆ ಭಾಗವಹಿಸಿದ್ದು ಇದರ ಜೊತೆಗೆ ಹಲವು ಕಾರ್ಯಕ್ರಮಗಳನ್ನು ತಾಲೂಕು ಸಂಘದಿಂದ ಹಮ್ಮಿಕೊಳ್ಳಲಾಗಿತ್ತು ನಂತರ ವರ್ಷದಲ್ಲಿ ಸಂಘದ ಅಧ್ಯಕ್ಷ ಕುಂಬಳೂರು ಹಾಲಪ್ಪ ಅಕಾಲಿಮರಣದ ನಂತರ ಮಹಾಮಾರಿ ಕೊರೋನಾದಿಂದ ಯಾವುದೆ ಕಾರ್ಯಕ್ರಮಗಳು ನಡೆಯದೆ ಇರುವುದರಿಂದ ಸಂಘದಿಂದಲೂ ಸಹ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ ಇದು ಮಂಜಪ್ಪನವರೆಗೆ ಗೊತ್ತಿದ್ದರೂ ಸಹ ತಾಲೂಕು ಸಂಘವನ್ನು ದೂಶಿಸಿದ್ದಾರೆ ಎಂದರು.
ತಾಲೂಕು ಕುರಬ ಸಮಾಜದ ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ ಮಾತನಾಡಿ ಕನಕ ವೃತ್ತದಲ್ಲಿ 10 ಲಕ್ಷ ರೂ.ವೆಚ್ಚದ 8.3 ಅಡಿ ಎತ್ತರದ ಕನಕ ಕಂಚಿನ ಪುತ್ಥಳಿಯು ಬೆಂಗಳೂರಿನ ಸಮೀಪ ಬಿಡದಿಯಲ್ಲಿ ಕೆತ್ತನೆ ಕಾರ್ಯ ಮುಕ್ತಯ ಅಂತದಲ್ಲಿದ್ದು ನೂತನ ವರ್ಷ ಅದನ್ನು ಪುರ ಪ್ರವೇಶ ಮಾಡಲಿದ್ದೇವೆ ಎಂದರು ಕನಕ ಪ್ರತಿಷ್ಠಾಪನೆಗೆ ಜಾತ್ಯಾತೀತತ,ಪಕ್ಷತೀತವಾಗಿ ಕುರಬ ಸಮಾಜದವರು ಸೇರಿದಂತೆ ಹಲವು ಸಮಾಜದ ಮುಖಂಡರನ್ನು ಅಹ್ವಾನಿಸಲಾಗುತ್ತದೆ ಎಂದರು.ದಾಸರ ಕಿರ್ತನೆಯಲ್ಲಿ ಕುಲ-ಕುಲ ಎಂದು ಹೋಡೆದಾಡದಿರಿ ಕುಲದ ನೆಲೆಯನ್ನಾದರೂ ಬಲ್ಲಿರಾ ಎಂಬ ಸಾಲುಗಳನ್ನು ಅರ್ಥ ಮಾಡಿಕೊಂಡು ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಕುರಬ ಸಮಾಜ ಸೇರಿದಂತೆ ಸಮಾಜದ ಒಡನಾಡಿಗಳಾಗಿರುವ ಅನ್ಯ ಸಮಾಜದ ಬಂಧುಗಳಲ್ಲಿಯೂ ಸಹ ದೇಣಿಗೆ ಸಂಗ್ರಹಿಸಲು ಇಚ್ಚಿಸಿದ್ದು ಅದರಂತೆ ಕನಕದಾಸ ಅನುಯಾಯಿಗಳು ಕಂಚಿನ ಪ್ರತಿಮೆ ತಮ್ಮ ಕೈಲಾದಷ್ಠು ಧನ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು.
ಮುಖಂಡ ಹೆಚ್.ಬಿ.ಶಿವಯೋಗಿ ಮಾತನಾಡಿ ಕನಕ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕಾಗಿನಲೆ ಕನಕ ಗುರುಗಳಾದ ನಿರಂಜನಾಂದಪುರಿ ಸ್ವಾಮೀಜಿ,ಹೊಸದುರ್ಗ ಶಾಖಾಮಠದ ಈಶ್ವರನಂದಪುರಿ ಸ್ವಾಮೀಜಿ,ಸಮಾಜದ ಸಚಿವರಾದ ಎಂ.ಟಿ.ಬಿನಾಗರಾಜ್,ಬೈರತಿ ಬಸವರಾಜ,ಕೆ.ಎಸ್.ಈಶ್ವರಪ್ಪ,ವಿಶ್ವನಾಥ್,ಶಿವಮೊಗ್ಗದ ಶ್ರೀಕಾಂತ್ ಸೇರಿದಂತೆ ಹಲವು ಸ್ವಾಮಿಜಿಗಳು ಜನಪ್ರತಿಗಳು ಭಾಗವಹಿಸಲಿದ್ದಾರೆ ಎಂದರು.
ತಾಲೂಕು ಕುರಬ ಸಮಾಜದ ಗೌರಧ್ಯಕ್ಷರಾದ ದಿಡಗೂರುಪಾಲಾಕ್ಷಪ್ಪ,ಗಾಳಿನಾಗರಾಜ,ನ್ಯಾಮತಿ ತಾಲೂಕ ಘಟಕದ ಅಧ್ಯಕ್ಷ ಮರಿಕನ್ನಪ್ಪ,ಕಾರ್ಯಧ್ಯಕ್ಷ ಬಾಬುಹೋಬಳದರ್,ಪ್ರಧಾನ ಕಾರ್ಯಧರ್ಶಿ ರಾಕೇಶ್‍ಚಿನ್ನು, ಉಪಾಧ್ಯಕ್ಷ ರಾಜುಕಡಗಣ್ಣಾರ,ಖಜಾಂಚಿ ಎಚ್.ಎಸ್.ರಂಜಿತ್,ನವೀನ್‍ಇಂಚರ,ಮುಖಂಡರಾದ ಎಚ್.ಎ.ಉಮಾಪತಿ,ಹೆಚ್.ಬಿ.ಶಿವಯೋಗಿ,ವಿನಯ್,ಹಳದಪ್ಪ,ಶ್ರೀನಿವಾಸ್,ತೆಗ್ಗಿಹಳ್ಳಿದಾನಪ್ಪ,ಗಂಜಿನಹಳ್ಳಿಚಂದ್ರಪ್ಪ ಮನೋಜ,ಬಂಗಾರಿ ಸಮಾಜದ ಮುಖಂಡರು ಇದ್ದರು.