ಹೊನ್ನಾಳಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳು ನನ್ನ ಜನ್ಮಭೂಮಿ, ನನ್ನ ಕರ್ಮಭೂಮಿ, ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸೋಮವಾರ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ 40 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 118 ಕೆರೆಗಳನ್ನು ತುಂಬಿಸುವ 519 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಸೇರಿದಂತೆ, ಅವಳಿ ತಾಲೂಕಿನಾಧ್ಯಂತ ಸಾಕಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೇ ಎಂದರು.
ಜನವರಿ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಸಚಿವರನ್ನು ಕರೆಯಿಸಿ, ಸುಮಾರು 1,600 ಕೋಟಿ ರೂಪಾಯಿಗೂ ಹೆಚ್ಚು ಕಾಮಗಾರಿಗಳಿಗೆ ಗುದ್ದಲಿಪೂಜೆ ಹಾಗೂ ಉದ್ಘಾಟನೆ ಮಾಡಿಸಲಾಗುವುದು ಎಂದರು.
ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ ಕೋಟ್ಯಾಂತರ ರೂಪಾಯಿ ಅನುದಾನಗಳನ್ನು ಹಾಕಿ ಅವುಗಳನ್ನು ಅಭಿವೃದ್ದಿ ಮಾಡಿದ್ದು, ಅವಳಿ ತಾಲೂಕುಗಳನ್ನು ಧೂಳು ಮುಕ್ತ ತಾಲೂಕುಗಳನ್ನಾಗಿ ಮಾಡುವ ಪಣ ತೊಟ್ಟಿದ್ದೇನೆಂದ ಶಾಸಕರು, ಅವಳಿ ತಾಲೂಕುಗಳನನ್ನು ಎಲ್ಲರೂ ತಿರುಗಿ ನೋಡುವಂತೆ ಅಭಿವೃದ್ದಿ ಮಾಡಲಾಗುವುದು ಎಂದರು.
ಸಾಮಾನ್ಯ ಶಿಕ್ಷಕನ ಮಗನನ್ನು ಅವಳಿ ತಾಲೂಕಿನ ಜನರು ಮೂರು ಬಾರೀ ಶಾಸಕನ್ನಾಗಿ ಮಾಡಿದ್ದು, ಅವಳಿ ತಾಲೂಕುಗಳು ನನ್ನ ಜನ್ಮಭೂಮಿ, ಕರ್ಮಭೂಮಿ ಅವುಗಳ ಸಮಗ್ರ ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯ ಎಂದ ಶಾಸಕರು ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆ ಇಲ್ಲಾ ಎಂದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ರಮೇಶ್ ಗೌಡ, ಶೇಖರಪ್ಪ ಸೇರಿದಂತೆ ಮುಖಂಡರಾದ ಕೆ.ಸಿ.ಪ್ರಭಾಕರ್,ರಾಜಪ್ಪ,ಮಲ್ಲಿಕಾರ್ಜುನ್,ಡಿ.ಎಂ.ಅಶೋಕ್,ಬಿ.ಪರಮೇಶ್ವರಪ್ಪ,ಎಸ್ಟಿ ಚಂದ್ರಪ್ಪ,ಡಾ||ಎ.ರಾಜಪ್ಪ, ಎ.ಚಂದ್ರಪ್ಪ ಸೇರಿದಂತೆ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *