ನ್ಯಾಮತಿ;-ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗ ಮತ್ತು ಬಸವ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಕೊಟ್ಟೂರು ಶ್ರೀ ಬಸವೇಶ್ವರರ ಸ್ಮರಣಾರ್ಥ ಅನುಭಾವ ಮತ್ತು ವಚನ ಕಾರ್ತಿಕೋತ್ಸವ ಆಯೋಜನೆ ಮಾಡಲಾಗಿತ್ತು ಕಲ್ಮಠ ಸೇವಾ ಸಮಿತಿ ಅಧ್ಯಕ್ಷರಾದ ಎ ಪ್ರಸಾದ್ ಜ್ಯೋತಿಯನ್ನ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಶ್ರೀ ಕಲ್ಮಠ ಸೇವಾÀಸಮಿತಿ ಅಧ್ಯಕ್ಷ ಎ ಪ್ರಸಾದ್ ನಂತರ ಮಾತನಾಡಿ “ಅಜ್ಞಾನದಿಂದ ಸುಜ್ಞಾನದಡೆಗೆ”
“ದುಃಖದಿಂದ ಸುಖದೊಡೆಗೆ” “ಹರಮುನಿದರೂ ಗುರು ಕಾಯುವನು” ಎನ್ನುವಂತೆ 15ನೇ ಶತಮಾನದಲ್ಲಿ ಪಂಚ ಗಣಾಧೀಶ್ವರರಲ್ಲಿ ಒಬ್ಬರಾಗಿ ಅವತರಿಸಿದ ಭಕ್ತರ ಹೃದಯ ಸಿಂಹಾಸನಾದೀಶ್ವರರಾದ ಕೊಟ್ಟೂರು ಬಸವೇಶ್ವರ ಈಗಲೂ ಸಹ ಬೇಡಿದ್ದನ್ನು ನೀಡುವಂತಹ ಕರುಣಾ ಮಹಿ ಪವಾಡ ಪುರುಷರಾಗಿದ್ದಾರೆ ಎಂದರು.
ಶ್ರೀ ಗುರು ಬಸವೇಶ್ವರರು ಕಾರ್ತಿಕೋತ್ಸವದ ಪ್ರಯುಕ್ತ
ದಾಖಲೆಗಳ ಆಧಾರದ ಮೇಲೆ ಗುರು ಕೊಟ್ಟೂರು ಬಸವೇಶ್ವರರ ಚರಿತ್ರೆಯ ಬಗ್ಗೆ ಅನುಭವವನ್ನು ಚರ ಜಂಗಮರಾದ ಶರಣ ಷಣ್ಮುಖಪ್ಪ ಸಾಲಿ ತಿಳಿಸಿದರು. ನರೆದಿದ್ದ ಭಕ್ತ ಸಮೂಹ ಸದರಿ ಚರಿತ್ರೆಯನ್ನು ಕೇಳಿ ಪುಳಕಿತರಾದರು. ಬಸವೋತ್ತರ ಯುಗದ ಮಹಾ ಮಾನವತಾವಾದಿ ಶ್ರೀ ಗುರು ಬಸವೇಶ್ವರರು ಶಿಖಾಪುರ ಎಂಬುವ ಹಳ್ಳಿಗೆ ಬಂದು ನಂತರ ಆ ಊರಿನಲ್ಲಿ ಮಾಡಿದ ದಾನ ಧರ್ಮದಿಂದಾಗಿ ಕೊಟ್ಟೂರು ಆಯಿತು. ನಂತರ ಗುರು ಬಸವೇಶ್ವರ ಎಂದು ಪ್ರಸಿದ್ಧವಾಗಿ ಇಂದು ಕೊಟ್ಟೂರು ಎಂದು ಪ್ರಚಲಿತದಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ ಜಿ ದಿನೇಶ್. ಕವಿತಾ ವೀರೇಶ್. ಅಂಬಿಕಾ ಸುಭಾಷ್ ಚಂದ್ರ. ಮಂಗಳ ಬಸವರಾಜ್. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಯೋಗಿ ಸಹ ಇದ್ದರು..