ಮಲೇಬೆನ್ನೂರು ಪಟ್ಟಣವನ್ನು ಬಯಲು ಶೌಚಮುಕ್ತ ಪ್ರದೇಶವೆಂದು ಘೋಷಣೆಯಾಗಿರುವಂತೆ ಪಟ್ಟಣವು ಸ್ವಚ್ಚ ಸರ್ವೇಕ್ಷಣಾ 2023ರಲ್ಲಿ ಭಾಗವಹಿಸಿದ್ದು, ನಿಯಮಾವಳಿ ರೀತ್ಯಾ ಮಲೇಬೆನ್ನೂರು ಪಟ್ಟಣವನ್ನು 1 ಸ್ಟಾರ್ ಪಟ್ಟಣವೆಂದು ಘೋಷಣೆ ಮಾಡಲಾಗಿದೆ ಎಂದು ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ವಿವಿಧ ಮಾನದಂಡಗಳಾದ ವೈಯಕ್ತಿಕ ಶೌಚಾಲಯ ನಿರ್ಮಾಣ ಪ್ರಾಥಮಿಕ ಹಂತದ ಮನೆ ಮನೆ ಕಸ ಸಂಗ್ರಹಣೆ ಹಾಗೂ ವಿಂಗಡಣೆ ಕಾರ್ಯ, ತ್ಯಾಜ್ಯ ಸಂಸ್ಕರಣೆ, ತ್ಯಾಜ್ಯ ವಿಲೇವಾರಿ, ಸಾರ್ವಜನಿಕ ಸಹಕಾರ ಹಾಗೂ ಸಮುದಾಯ ಸಾರ್ವಜನಿಕ ಶೌಚಾಲಯಗಳ ಬಳಕೆ ಸಂಬಂಧಿಸಿದ ವಿವಿಧ ಮಾನದಂಡಗಳ ಅನುಸಾರವಾಗಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಾರ್ವಜನಿಕರು ಸ್ವಚ್ಚ ಸರ್ವೇಕ್ಷಣೆಯಲ್ಲಿ ಭಾಗವಹಿಸಿ ಮಲೇಬೆನ್ನೂರು ಪುರಸಭೆ ಉತ್ತಮ ಶ್ರೇಯಾಂಕ ಪಡೆಯಲು ಸಂಪೂರ್ಣ ಸಹಕಾರ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.