ಕೌಶಲ್ಯ ಅಭಿವೃದ್ದಿ ಮತ್ತು ಆದಾಯಗಳಿಕೆಗಾಗಿ ವಿವಿಧ ತರಬೇತಿ ಪಡೆದ ಫಲಾನುಭವಿಗಳಿಗೆ ಡಿ.16 ರಂದು ಬೆಳಿಗ್ಗೆ 11 ಗಂಟೆಗೆ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೊಲಿಗೆಯಂತ್ರ ಹಾಗೂ ಉಪಕರಣಗಳ ಪೆಟ್ಟಿಗೆ ವಿತರಣೆ ಜರುಗಲಿದೆ.
ಜೈ ಭೀಮನಗರ ಹರಿಹರದಲ್ಲಿ ಮಾಯಕೊಂಡ ಕ್ಷೇತ್ರದ ಶಾಸಕರು ಹಾಗೂ ಈ ನಿಗಮದ ಅಧ್ಯಕ್ಷರಾದ ಪ್ರೊ.ಲಿಂಗಣ್ಣ ಹಾಗೂ ಹರಿಹರ ಕ್ಷೇತ್ರದ ಶಾಸಕರಾದ ಎಸ್.ರಾಮಪ್ಪ ಇವರ ನೇತೃತ್ವದಲ್ಲಿ ಹೊಲಿಗೆಯಂತ್ರ, ಉಪಕರಣ ಪೆಟ್ಟಿಗೆಗಳ ಸವಲತ್ತುಗಳನ್ನು ವಿತರಿಸಲಾಗುವುದು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶಾಹಿನ್ ಬಾನು, ಸದಸ್ಯರಾದ ದಿನೇಶ್ ಬಾಬು, ಪೌರಾಯುಕ್ತರಾದ ಬಸವರಾಜು ಐಗೂರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ್, ಸಹಾಯಕ ನಿರ್ದೇಶಕರಾದ ಸೈಯದ್ ನಸೀರುದ್ದೀನ್ ಹಾಗೂ ಪ.ಜಾತಿಯ ಮುಖಂಡರು ಭಾಗವಹಿಸುವರೆಂದು ಜಿಲ್ಲಾ ಸಂಯೋಜಕರಾದ ಎ.ಎಸ್ ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.